ನವದೆಹಲಿ(ಜು.15): ಭಾರತದ ತಾರಾ ಅಥ್ಲೀಟ್‌ ಹಿಮಾ ದಾಸ್‌ ಚೆಕ್‌ ಗಣರಾಜ್ಯದ ಕ್ಲಾಡ್ನೊ ಅಥ್ಲೆಟಿಕ್ಸ್‌ ಕೂಟದ ಮಹಿಳೆಯರ 200 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 

ವಾರದಲ್ಲಿ 2 ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದ ಹಿಮಾ ದಾಸ್!

ಕೇವಲ 11 ದಿನಗಳಲ್ಲಿ ಇದು ಅವರು ಗೆದ್ದ 3ನೇ ಚಿನ್ನದ ಪದಕವಾಗಿದೆ. ಪೋಲೆಂಡ್‌ನಲ್ಲಿ ಜು.2ರಂದು ನಡೆದಿದ್ದ ಪೋಜ್ನಾನ್‌ ಗ್ರ್ಯಾನ್‌ ಪ್ರಿಯಲ್ಲಿ ಚಿನ್ನ ಜಯಿಸಿದ್ದ ಹಿಮಾ, ಜು.7ರಂದು ಪೋಲೆಂಡ್‌ನ ಕುಟ್ನೊ ಅಥ್ಲೆಟಿಕ್ಸ್‌ ಕೂಟದಲ್ಲೂ ಮೊದಲ ಸ್ಥಾನ ಪಡೆದಿದ್ದರು. 

ಇದೇ ವೇಳೆ ಪುರುಷರ 400 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದ ಮೊಹಮದ್‌ ಅನಾಸ್‌, ಈ ವರ್ಷ ಸೆಪ್ಟೆಂಬರ್‌ನಲ್ಲಿ ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು.