ಪಂದ್ಯದ ಟಾಸ್ ನಡೆದಿಲ್ಲವಾದರೂ, ಎರಡು ತಂಡಗಳ ಆಡುವ ಹನ್ನೊಂದರ ಬಳಗ ಬಹಿರಂಗಗೊಂಡಿದೆ. ಇದು ಹೇಗೆ ಸಾಧ್ಯ ಎನ್ನುವ ಕುತೂಹಲ ಸಹಜವಾಗಿಯೇ ಮೂಡಲಿದೆ.

ಲಾರ್ಡ್ಸ್[ಆ.10]: ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಲಾರ್ಡ್ಸ್’ನಲ್ಲಿ ಆರಂಭವಾಗಬೇಕಿದ್ದು, ಮಳೆಯಿಂದಾಗಿ ಮೊದಲ ದಿನದಾಟ ನಡೆಯಲಿಲ್ಲ. ಟಾಸ್ ಆಗದಿದ್ದರೂ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡದ ಆಡುವ ಹನ್ನೊಂದರ ಬಳಗದ ಆಟಗಾರರ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪಂದ್ಯದ ಟಾಸ್ ನಡೆದಿಲ್ಲವಾದರೂ, ಎರಡು ತಂಡಗಳ ಆಡುವ ಹನ್ನೊಂದರ ಬಳಗ ಬಹಿರಂಗಗೊಂಡಿದೆ. ಇದು ಹೇಗೆ ಸಾಧ್ಯ ಎನ್ನುವ ಕುತೂಹಲ ಸಹಜವಾಗಿಯೇ ಮೂಡಲಿದೆ. ಪಂದ್ಯದ ಅಧಿಕೃತ ಸ್ಕೋರ್ ಶೀಟ್‌ನ ಚಿತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಸ್ಕೋರ್ ಶೀಟ್ ಪ್ರಕಾರ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿಸಿದ್ದ ತಂಡವನ್ನೇ ಆಡಿಸಲು ಭಾರತ ನಿರ್ಧರಿಸಿದೆ. ಇಂಗ್ಲೆಂಡ್ ತಂಡ ಬೆನ್ ಸ್ಟೋಕ್ಸ್ ಬದಲಿಗೆ ಆಲ್ರೌಂಡರ್ ಕ್ರಿಸ್ ವೋಕ್ಸ್‌ರನ್ನು ಕಣಕ್ಕಿಳಿಸುತ್ತಿದೆ ಎನ್ನಲಾಗಿದೆ. 

Scroll to load tweet…

ಒಂದೊಮ್ಮೆ ಈ ಸ್ಕೋರ್ ಶೀಟ್ ಅಸಲಿಯಾದರೆ, ವಿರಾಟ್ ಕೊಹ್ಲಿ ನಾಯಕನಾದ ಬಳಿಕ ಇದೇ ಮೊದಲ ಬಾರಿಗೆ ಸತತ ೨ ಟೆಸ್ಟ್‌ಗಳಲ್ಲಿ ಒಂದೇ ತಂಡವನ್ನಾಡಿಸಿದ ದಾಖಲೆ ಬರೆಯಲಿದ್ದಾರೆ. ಈ ವರೆಗೂ 36 ಟೆಸ್ಟ್‌ಗಳಲ್ಲಿ ತಂಡವನ್ನು ಮುನ್ನಡೆಸಿರುವ ಕೊಹ್ಲಿ, ಎಲ್ಲಾ ಪಂದ್ಯಗಳಲ್ಲೂ ಆಡುವ ಹನ್ನೊಂದರ ಬಳಗವನ್ನು ಬದಲಿಸಿದ್ದಾರೆ.