ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್'ನಲ್ಲಿ ಭಾರತೀಯ ಆಟಗಾರರು ಪ್ರಭಾವಶಾಲಿ ಪ್ರದರ್ಶನ ಮುಂದು ವರಿಸಿದ್ದು, ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೂತನವಾಗಿ ಪ್ರಕಟಗೊಂಡಿ ರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 50ರಲ್ಲಿ ಭಾರತದ 7 ಆಟಗಾರರು ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಬ್ಯಾಡ್ಮಿಂಟನ್‌ನಲ್ಲಿ ಚೀನಾ, ಡೆನ್ಮಾರ್ಕ್, ತೈಪೆ, ಹಾಂಕಾಂ ಗ್, ಮಲೇಷ್ಯಾ, ಇಂಡೋನೇಷ್ಯಾ ದಂತಹ ಪ್ರಬಲ ರಾಷ್ಟ್ರಗಳನ್ನು ಭಾರತೀಯರು ಹಿಂದಿಕ್ಕಿದ್ದಾರೆ.
ನವದೆಹಲಿ(ಜು.29): ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್'ನಲ್ಲಿ ಭಾರತೀಯ ಆಟಗಾರರು ಪ್ರಭಾವಶಾಲಿ ಪ್ರದರ್ಶನ ಮುಂದು ವರಿಸಿದ್ದು, ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೂತನವಾಗಿ ಪ್ರಕಟಗೊಂಡಿ ರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 50ರಲ್ಲಿ ಭಾರತದ 7 ಆಟಗಾರರು ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಬ್ಯಾಡ್ಮಿಂಟನ್ನಲ್ಲಿ ಚೀನಾ, ಡೆನ್ಮಾರ್ಕ್, ತೈಪೆ, ಹಾಂಕಾಂ ಗ್, ಮಲೇಷ್ಯಾ, ಇಂಡೋನೇಷ್ಯಾ ದಂತಹ ಪ್ರಬಲ ರಾಷ್ಟ್ರಗಳನ್ನು ಭಾರತೀಯರು ಹಿಂದಿಕ್ಕಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಯುಎಸ್ ಓಪನ್ ಗ್ರಾನ್ ಪ್ರೀ ಮುಡಿಗೇರಿಸಿಕೊಂಡ ಎಚ್.ಎಸ್. ಪ್ರಣಯ್ ವಿಶ್ವ ರ್ಯಾಂಕಿಂಗ್ನಲ್ಲಿ 17ನೇ ಸ್ಥಾನಕ್ಕೇರಿದ್ದಾರೆ. ಯುಎಸ್ ಓಪನ್ ರನ್ನರ್-ಅಪ್ ಪಿ.ಕಶ್ಯಪ್ ೧೨ ಸ್ಥಾನಗಳ ಜಿಗಿತ ಕಂಡು 47ನೇ ಸ್ಥಾನ ಪಡೆದರೆ, ಸಮೀರ್ ವರ್ಮಾ 28ನೇ ಸ್ಥಾನಕ್ಕೇರಿದ್ದರೆ, ಅಜಯ್ ಜಯರಾಮ್ 16, ಬಿ.ಸಾಯಿ ಪ್ರಣಿತ್ 19ನೇ ಸ್ಥಾನದಲ್ಲಿದ್ದಾರೆ. ಕಿದಾಂಬಿ ಶ್ರೀಕಾಂತ್ 8ನೇ ಸ್ಥಾನ ಪಡೆದಿದ್ದಾರೆ.
