ನೂತನ ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ ಭಾರತೀಯ ಪುಟ್ಬಾಲ್ ತಂಡ ತಾನು ಹಿಂದಿದ್ದ 148ನೇ ಸ್ಥಾನದಿಂದ 137ನೇ ಸ್ಥಾನಕ್ಕೆ ಜಿಗಿದಿದೆ.

ನವದೆಹಲಿ(ಅ.20): ಇಂದು ಬಿಡುಗಡೆಗೊಂಡ ನೂತನ ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ ಭಾರತೀಯ ಪುಟ್ಬಾಲ್ ತಂಡ ತಾನು ಹಿಂದಿದ್ದ 148ನೇ ಸ್ಥಾನದಿಂದ 137ನೇ ಸ್ಥಾನಕ್ಕೆ ಜಿಗಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಕಳೆದ ಆರು ವರ್ಷಗಳಲ್ಲಿ ಭಾರತ ತಂಡ ಗಳಿಸಿರುವ ಶ್ರೇಷ್ಠ ಶ್ರೇಯಾಂಕವಾಗಿದ್ದು, 2010ರ ಆಗಸ್ಟ್‌ನಲ್ಲಿಯೂ ಭಾರತವು 137ನೇ ಸ್ಥಾನ ಗಳಿಸಿತ್ತು.

ಕಳೆದ ತಿಂಗಳು ಮುಂಬೈನಲ್ಲಿ ನಡೆದಿದ್ದ ಸೌಹಾರ್ದ ಪಂದ್ಯದಲ್ಲಿ ಭಾರತ, 114ನೇ ಶ್ರೇಯಾಂಕಿತ ತಂಡವಾದ ಪೋರ್ಟೊ ರಿಕೊ ತಂಡವನ್ನು ಮಣಿಸಿತ್ತು. ಇದು ಒಮ್ಮೆಲೇ 230 ಅಂಕಗಳನ್ನು ಭಾರತದ ಮಡಿಲಿಗೆ ತಂದು ಹಾಕಿದ್ದರಿಂದಾಗಿ ಭಾರತ ಶ್ರೇಯಾಂಕ ಪಟ್ಟಿಯಲ್ಲಿ ಇಂಥ ಏರಿಕೆ ಕಾಣಲು ಕಾರಣ.