ಟೀಂ ಇಂಡಿಯಾ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್'ನಲ್ಲಿ ಹೀನಾಯ ಸೋಲಿನ ಬಳಿಕ ಬೆಂಗಳೂರು ಟೆಸ್ಟ್'ನಲ್ಲಿ ಫೀನಿಕ್ಸ್'ನಂತೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು.

ಬೆಂಗಳೂರು(ಮಾ.07): ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌'ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

121 ರೇಟಿಂಗ್ ಪಾಯಿಂಟ್ಸ್‌'ಗಳನ್ನು ಪಡೆದಿರುವ ಕೊಹ್ಲಿ ನೇತೃತ್ವದ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರತಿ ವರ್ಷ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಪಡೆದಿರುವ ತಂಡಕ್ಕೆ ನೀಡುವ 1 ಮಿಲಿಯನ್ ಅಮೆರಿಕ ಡಾಲರ್ (ಭಾರತೀಯ ರು.ಗಳಲ್ಲಿ 6 ಕೋಟಿ 67 ಲಕ್ಷ) ಬಹುಮಾನಕ್ಕೆ ಭಾಜನವಾಗಿದೆ. ಈ ಬಗ್ಗೆ ಐಸಿಸಿ ಬಹುಮಾನದ ಮೊತ್ತವನ್ನು ದೃಢಪಡಿಸಿದೆ.

Scroll to load tweet…

ಟೀಂ ಇಂಡಿಯಾ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್'ನಲ್ಲಿ ಹೀನಾಯ ಸೋಲಿನ ಬಳಿಕ ಬೆಂಗಳೂರು ಟೆಸ್ಟ್'ನಲ್ಲಿ ಫೀನಿಕ್ಸ್'ನಂತೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು.