Asianet Suvarna News Asianet Suvarna News

ಕಿವೀಸ್ ವಿರುದ್ಧ ಸರಣಿ ಗೆದ್ದ ಭಾರತ ನಂ 1

India won the series against New Zealand

ಕೋಲ್ಕತ್ತಾ(ಅ.03): ತವರಿನಲ್ಲಿ ನಡೆದ 250ನೇ ಟೆಸ್ಟ್​​​  ಪಂದ್ಯದಲ್ಲಿ ಕಿವೀಸ್ ವಿರುದ್ಧ ಟೀಮ್ ಇಂಡಿಯಾ 178 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಗೆಲುವಿನಿಂದ ಐಸಿಸಿ ಱಂಕಿಂಗ್​ನಲ್ಲಿ ಭಾರತ ಅಗ್ರಸ್ಥಾನಕ್ಕೇರಿದ್ದು, ಪಾಕಿಸ್ತಾನವನ್ನು 2ನೇ ಸ್ಥಾನಕ್ಕೆ ತಳ್ಳಿದೆ. 

ಕೋಲ್ಕತ್ತಾದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​​​ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ, ಕಿವೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸತತ  ಎರಡನೇ ಪಂದ್ಯವನ್ನು ಜಯಿಸಿದ್ದು, ಈ ಮೂಲಕ  ಟೀಮ್ ಇಂಡಿಯಾ 2-0ಯಿಂದ ಸರಣಿ ಮುನ್ನಡೆ ಪಡೆದುಕೊಂಡು, ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ಕೈವಶ ಮಾಡಿಕೊಂಡಿದೆ. 

ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲಿ ನಡೆದ 2ನೇ ಟೆಸ್ಟ್​​​ದಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 316/10 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 263/10 ರನ್ ದಾಖಲಿಸಿದರೆ, ನ್ಯೂಜಿಲೆಂಡ್ ತಂಡ​ ಮೊದಲ ಇನ್ನಿಂಗ್ಸ್ ನಲ್ಲಿ  202/10 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 197/10 ದಾಖಲಿಸಿತ್ತು. 

ಇದು ಕೊಹ್ಲಿ ನಾಯಕತ್ವದಲ್ಲಿ ಸತತ 4ನೇ ಟೆಸ್ಟ್​ ಸರಣಿ ಗೆಲುವಾಗಿದ್ದು, ಲಂಕಾ, ಆಫ್ರಿಕಾ, ವಿಂಡೀಸ್ ವಿರುದ್ಧ ಸರಣಿ ಗೆದ್ದಿದ್ದ ಭಾರತ ಈಗ ಕಿವೀಸ್ ವಿರುದ್ಧವು ಗೆಲುವಿನ ಅಭಿಯಾನವನ್ನು ಮುಂದುವರೆಸಿದೆ. ಇದಲ್ಲದೇ ಇದು ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ 10ನೇ ಟೆಸ್ಟ್ ಸರಣಿ ಗೆಲುವಾಗಿದೆ.