ಬಾಂಗ್ಲಾ ಮಣಿಸಿ ಫೈನಲ್ ತಲುಪಿದ ಭಾರತ : ಮಿಂಚಿದ ಸುಂದರ್, ರೋಹಿತ್

India Won By 17 Runs
Highlights

ತಮೀಮ್ ಇಕ್ಬಾಲ್ (27),ಶಬ್ಬೀರ್ ರಹ್ಮಾನ್ (27) ಹೊರತುಪಡಿಸಿದರೆ ಉಳಿದವರ್ಯಾರು ಹೋರಾಟ ತೋರಲಿಲ್ಲ. ಯುವಪ್ರತಿಭೆ ಸ್ಪಿನ್ನರ್ ವಾಷಿಂಗ್ಟ'ನ್ ಸುಂದರ್ 4 ಓವರ್'ಗಳಲ್ಲಿ 22 ರನ್'ಗಳನ್ನು ನೀಡಿ 3 ವಿಕೇಟ್ ಕಬಳಿಸಿದರು.

ಕೊಲಂಬೊ(ಮಾ.14): ರೋಹಿತ್ ಸ್ಪೋಟಕ ಬ್ಯಾಟಿಂಗ್ ಹಾಗೂ ನವ ಪ್ರತಿಭೆ ವಾಷಿಂಗ್ಟ್'ನ್ ಸುಂದರ್  ಬೌಲಿಂಗ್ ದಾಳಿಯಿಂದ ಬಾಂಗ್ಲಾ ತಂಡವನ್ನು 17 ರನ್'ಗಳಿಂದ ಸೋಲಿಸುವುದರೊಂದಿಗೆ ನಿದಿಹಾಸ್ ಟಿ20 ತ್ರಿಕೋನ ಸರಣಿ ಫೈನಲ್ ತಲುಪಿದೆ.

ಭಾರತ ನೀಡಿದ್ದ 177 ರನ್'ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ವಿಕೇಟ್ ಕೀಪರ್ ಮುಷ್ಫಿಕರ್ ರಹೀಮ್ ಏಕಾಂಗಿ  ಹೋರಾಟವನ್ನು ಹೊರತುಪಡಿಸಿ 20 ಓವರ್'ಗಳಲ್ಲಿ 6 ವಿಕೇಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಕೊನೆಯವರೆಗೂ ಆಟವಾಡಿದ ರಹೀಮ್  55 ಚಂಡುಗಳಲ್ಲಿ  8 ಬೌಂಡರಿ 1 ಸಿಕ್ಸ್'ರ್'ನೊಂದಿಗೆ 72 ರನ್ ರನ್ ಗಳಿಸಿ ಅಜೇಯರಾಗಿ ಉಳಿದರು.

ತಮೀಮ್ ಇಕ್ಬಾಲ್ (27),ಶಬ್ಬೀರ್ ರಹ್ಮಾನ್ (27) ಹೊರತುಪಡಿಸಿದರೆ ಉಳಿದವರ್ಯಾರು ಹೋರಾಟ ತೋರಲಿಲ್ಲ. ಯುವಪ್ರತಿಭೆ ಸ್ಪಿನ್ನರ್ ವಾಷಿಂಗ್ಟ'ನ್ ಸುಂದರ್ 4 ಓವರ್'ಗಳಲ್ಲಿ 22 ರನ್'ಗಳನ್ನು ನೀಡಿ 3 ವಿಕೇಟ್ ಕಬಳಿಸಿದರು. ಸಿರಾಜ್, ಟಾಕೂರ್, ಚಹಾಲ್ ತಲಾ ಒಂದೊಂದು ವಿಕೇಟ್ ಕಿತ್ತರು.

ಶರ್ಮಾ, ರೈನಾ ರೋಚಕ ಆಟ

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ತಂಡ ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಅವರ ಸ್ಫೋಟಕ ಆಟದಿಂದಾಗಿ ಭಾರತ ತಂಡ ತ್ರಿಕೋನ ಟಿ20 ಸರಣಿಯ 4ನೇ ಲೀಗ್ ಪಂದ್ಯದಲ್ಲಿ 177 ರನ್'ಗಳ ಟಾರ್ಗೆಟ್ ನೀಡಿತ್ತು.

61 ಚಂಡುಗಳನ್ನು ಎದುರಿಸಿ 5 ಸಿಕ್ಸ್'ರ್ ಹಾಗೂ 5 ಬೌಂಡರಿಯೊಂದಿಗೆ  89 ರನ್ ಬಾರಿಸಿದರು. ರೋಹಿತ್'ಗೆ ಆರಂಭದಲ್ಲಿ ಶಿಖರ್ ಧವನ್ ಉತ್ತಮ ಜೊತೆಯಾಟ ನೀಡಿದರು. 27 ಚಂಡುಗಳನ್ನು ಎದುರಿಸಿದ ಧವನ್ 5 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 35 ಬಾರಿಸಿದರು. ಮೊದಲ ಕ್ರಮಾಂಕದ ಆಟಗಾರ ರೈನಾ ಕೂಡ ಅಮೋಘ ಆಟವಾಡಿ 30 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸ್'ರ್'ನೊಂದಿಗೆ 47 ರನ್ ಸಿಡಿಸಿದರು. 20 ಓವರ್'ಗಳಲ್ಲಿ ಭಾರತ ತಂಡ 176/3 ರನ್ ಪೇರಿಸಿತು.

 

ಸ್ಕೋರ್

ಭಾರತ 20 ಓವರ್'ಗಳಲ್ಲಿ 176/3

(ರೋಹಿತ್ ಶರ್ಮಾ 89, ಶಿಕರ್ ಧವನ್ 35, ಸುರೇಶ್ ರೈನಾ 47)

ಬಾಂಗ್ಲಾದೇಶ 20 ಓವರ್'ಗಳಲ್ಲಿ 159/6

(ಮುಷ್ಫಿಕರ್ ರಹೀಮ್ ಅಜೇಯ 72, ವಾಷಿಂಗ್ಟ್'ನ್ ಸುಂದರ್ 22/3)

ಫಲಿತಾಂಶ: ಭಾರತಕ್ಕೆ 17 ರನ್ ಜಯ

ಪಂದ್ಯ ಶ್ರೇಷ್ಟ: ರೋಹಿತ್ ಶರ್ಮಾ

ಫೈನಲ್ ಪಂದ್ಯ: ಮಾ.18 ರಂದು ಭಾನುವಾರ ಸಂಜೆ 7 ಗಂಟೆಗೆ

loader