2018ರ ಜುಲೈ-ಆಗಸ್ಟ್‌'ನಲ್ಲಿ ಮಹಿಳಾ ಹಾಕಿ ವಿಶ್ವಕಪ್‌'ನಲ್ಲಿ ಲಂಡನ್‌'ನಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ.
ಜೋಹಾನ್ಸ್'ಬರ್ಗ್(ಅ.30): ಭಾರತ ಮಹಿಳಾ ಹಾಕಿ ತಂಡ, 2018ರ ವಿಶ್ವಕಪ್'ಗೆ ಅರ್ಹತೆ ಪಡೆದುಕೊಂಡಿದೆ.
ಆಫ್ರಿಕನ್ ಕಪ್ ಆಫ್ ನೇಷನ್ಸ್ ಹಾಕಿ ಟೂರ್ನಿಯಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ತಂಡ 4-0 ಗೋಲುಗಳಿಂದ ಘಾನಾ ಎದುರು ಗೆಲುವು ಸಾಧಿಸಿದ್ದು, ಭಾರತದ ವಿಶ್ವಕಪ್ ಹಾದಿಯನ್ನು ಸುಗಮಗೊಳಿಸಿತು.
ಈ ಪಂದ್ಯಕ್ಕೂ ಮೊದಲೇ ಆಫ್ರಿಕಾ ವಿಶ್ವಕಪ್'ಗೆ ಅರ್ಹತೆ ಪಡೆದಿದ್ದರಿಂದ, ವಿಶ್ವ ಹಾಕಿ ಲೀಗ್ ಸೆಮೀಸ್ನಲ್ಲಿ 8ನೇ ಸ್ಥಾನ ಪಡೆದಿದ್ದ ಭಾರತಕ್ಕೆ ಅರ್ಹತೆ ಸಿಕ್ಕಿತು.
2018ರ ಜುಲೈ-ಆಗಸ್ಟ್'ನಲ್ಲಿ ಮಹಿಳಾ ಹಾಕಿ ವಿಶ್ವಕಪ್'ನಲ್ಲಿ ಲಂಡನ್'ನಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ.
