ರಿಯೋ ಡಿ ಜನೈರೋ (ಸೆ.10): ಕಳೆದ ರಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ  ಭಾರತದ ಚಿನ್ನದ ಆಸೆ ಪೂರ್ತಿಯಾಗದಿದ್ದರೂ, ಈಗ ರಿಯೋದಲ್ಲಿ ನಡೆಯುತ್ತಿರುವ  ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ರಲ್ಲಿ  ಇಬ್ಬರು ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ.  

ಭಾರತದ ಇಬ್ಬರು ಕ್ರೀಡಾಪಟುಗಳು ಪದಕ ಗಳಿಸಿದ್ದಾರೆ. ಹೈಜಂಪ್ ವಿಭಾಗದಲ್ಲಿ  ಮರಿಯಪ್ಪನ್ ಚಿನ್ನ ಪದಕಕ್ಕೆ ಮುತ್ತಿಟ್ಟರೇ, ಇದೇ ವಿಭಾಗದಲ್ಲಿ ವರುಣ್ ಸಿಂಗ್ ಕಂಚು ಗಳಿಸಿದ್ದಾರೆ.

ಬ್ರೇಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ರಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಇಬ್ಬರು ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.