ಕಾಮನ್'ವೆಲ್ತ್ ಕ್ರೀಡಾಕೂಟ: ಮಿಶ್ರಾ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಚಿನ್ನ

India win gold in mixed team badminton at 2018 Commonwealth Games
Highlights

ಅಶ್ವಿನಿ ಪೊನ್ನಪ್ಪ, ಸತ್ವಿಕ್'ರಾಜ್, ಸೈನಾ ನೇವಾಲ್, ಕಿಡಂಬಿ ಶ್ರೀಕಾಂತ್, ರಾಂಕಿರೆಡ್ಡಿ ಅವರು ಫೈನಲ್'ನಲ್ಲಿ ಮಲೇಷ್ಯದ ಚಾನ್ ಪೆಂಗ್ ಸೂನ್ ಹಾಗೂ ಗೋ ಲಿ ಯಿಂಗ್ ಅವರನ್ನು 21-14,15-21,21-15 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಗೋಲ್ಡ್'ಕೋಸ್ಟ್(ಏ.09): ಭಾರತವು ಕಾಮನ್'ವೆಲ್ತ್ ಕ್ರೀಡಾ'ಕೂಟದಲ್ಲಿ 10ನೇ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. 5ನೇ ದಿನವಾದ ಇಂದು ಮಿಶ್ರ ಬ್ಯಾಡ್ಮಿಂಟನ್'ನಲ್ಲಿ ಅಶ್ವಿನಿ ಪೊನ್ನಪ್ಪ, ಸತ್ವಿಕ್'ರಾಜ್, ಸೈನಾ ನೇವಾಲ್, ಕಿಡಂಬಿ ಶ್ರೀಕಾಂತ್, ರಾಂಕಿರೆಡ್ಡಿ ಅವರು ಫೈನಲ್'ನಲ್ಲಿ ಮಲೇಷ್ಯದ ಚಾನ್ ಪೆಂಗ್ ಸೂನ್ ಹಾಗೂ ಗೋ ಲಿ ಯಿಂಗ್ ಅವರನ್ನು 21-14,15-21,21-15 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

10 ಚಿನ್ನ, 4 ಬೆಳ್ಳಿ ಹಾಗೂ 5 ಕಂಚಿನೊಂದಿಗೆ ಭಾರತ ಒಟ್ಟು 19 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಮೂರನರ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳಿವೆ.  

loader