Asianet Suvarna News Asianet Suvarna News

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲಿದೆ

'ಬಿಗ್ ತ್ರೀ' ರಾಷ್ಟ್ರಗಳಿಗೆ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಬಿಸಿಸಿಐ ಹಾಗೂ ಐಸಿಸಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ತಲೆದೂರಿದ್ದು ಇನ್ನೂ ಬಗೆಹರಿದಿಲ್ಲ.

India will take part in Champions Trophy 2017
  • Facebook
  • Twitter
  • Whatsapp

ಬೆಂಗಳೂರು(ಮೇ.06): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಜಟಾಪಟಿಯ ನಡುವೆಯೂ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ.

ಹೌದು ಜೂನ್ ಒಂದರಿಂದ ಇಂಗ್ಲೆಂಡ್'ನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಪಾಲ್ಗೊಳ್ಳಲಿದೆ ಎಂದು ಆಡಳಿತಾತ್ಮಕ ಸಮಿತಿಯ ಹಂಗಾಮಿ ಅಧ್ಯಕ್ಷ ಕೆ.ಕೆ. ಖನ್ನಾ ತಿಳಿಸಿದ್ದಾರೆ. ಟೂರ್ನಿ ಆರಂಭಕ್ಕೂ 20 ದಿನ ಮುಂಚಿತವಾಗಿ ಅಂದರೆ ಮೇ.08ರ ಸೋಮವಾರದಂದು 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗುವುದು ಎಂದು ಖನ್ನಾ ಹೇಳಿದ್ದಾರೆ.

ಬಿಗ್ ತ್ರೀ ಬಗ್ಗೆ ಒಂದಷ್ಟು ಮಾಹಿತಿಗಾಗಿ

'ಬಿಗ್ ತ್ರೀ' ರಾಷ್ಟ್ರಗಳಿಗೆ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಬಿಸಿಸಿಐ ಹಾಗೂ ಐಸಿಸಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ತಲೆದೂರಿದ್ದು ಇನ್ನೂ ಬಗೆಹರಿದಿಲ್ಲ. ಈ ನಡುವೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಜಹೀರ್ ಖಾನ್ ಸೇರಿದಂತೆ ಸಾಕಷ್ಟು ಹಿರಿಯ ಆಟಗಾರರು ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಪಾಲ್ಗೊಳ್ಳಬೇಕು ಎಂದು ದ್ವನಿಯೆತ್ತಿದ್ದರು. ಹಾಗೆಯೇ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಕೂಡಾ ಟೀಂ ಇಂಡಿಯಾ ಟೂರ್ನಿಯಲ್ಲಿ ಭಾಗವಹಿಸುವ ಕುರಿತಂತೆ ಒಲವು ತೋರಿದ್ದಾರೆಂದು ಹೇಳಲಾಗುತ್ತಿದೆ.

Follow Us:
Download App:
  • android
  • ios