Asianet Suvarna News Asianet Suvarna News

ಆಫ್ಘಾನ್-ವೆಸ್ಟ್ ಇಂಡೀಸ್ ಸರಣಿಗೆ ಭಾರತ ಆತಿಥ್ಯ; ವೇಳಾಪಟ್ಟಿ ಪ್ರಕಟ!

ಆಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟಗೊಂಡಿದೆ. ಈ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಟೂರ್ನಿ ವಿವರ ಇಲ್ಲಿದೆ.

India will host Afghanistan vs west indies bilateral series
Author
Bengaluru, First Published Jul 7, 2019, 9:10 PM IST

ಮುಂಬೈ(ಜು.07): ಆಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟಗೊಂಡಿದೆ. ವಿಶೇಷ ಅಂದರೆ ಈ ಸರಣಿಗೆ ಭಾರತ ಆತಿಥ್ಯ ವಹಿಸಲಿದೆ. ಆದರೆ ಯಾವೆಲ್ಲಾ ಕ್ರೀಡಾಂಗಣದಲ್ಲಿ ಅಫ್ಘಾನ್ ಹಾಗೂ ವೆಸ್ಟ್ ಇಂಡೀಸ್ ಪಂದ್ಯ ಆಡಲಿದೆ ಅನ್ನೋದು ಶೀಘ್ರದಲ್ಲೇ ಹೊರಬೀಳಲಿದೆ.   3 ಟಿ20, 3 ಏಕದಿನ ಹಾಗೂ ಏಕೈಕ ಟೆಸ್ಟ್ ಪಂದ್ಯದ ಸರಣಿ ನವೆಂಬರ್ 5 ರಿಂದ ಆರಂಭಗೊಳ್ಳಲಿದೆ. 

ಆಫ್ಘಾನಿಸ್ತಾನ-ವೆಸ್ಟ್ ಇಂಡೀಸ್ ಸರಣಿ

ನವೆಂಬರ್ 5 – 1ನೇ T20 
ನವೆಂಬರ್ 7 – 2ನೇ T20 
ನವೆಂಬರ್ 9 – 3ನೇ T20 
ನವೆಂಬರ್ 13 – 1ನೇ ODI
ನವೆಂಬರ್ 16 – 2ನೇ ODI
ನವೆಂಬರ್ 18 – 3ನೇ ODI
ನವೆಂಬರ್ 27-ಡಿಸೆಂಬರ್ 1 – ಏಕೈಕ ಟೆಸ್ಟ್

ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ನಡುವಿನ ಸರಣಿಗೂ ಭಾರತ ಆತಿಥ್ಯ ವಹಿಸಿತ್ತು. ಈ ಎರಡು ತಂಡಗಳು ಧರ್ಮಶಾಲಾದಲ್ಲಿ ದ್ವಿಪಕ್ಷೀಯ ಸರಣಿ ಆಡಿತ್ತು. 
 

Follow Us:
Download App:
  • android
  • ios