ಪಂದ್ಯದ 19ನೇ ನಿಮಿಷದಲ್ಲೇ ಮಲೇಷ್ಯಾ ತಂಡದ ರಾಜಿ ರಹೀಮ್ ಹಾಗೂ 20ನೇ ನಿಮಿಷದಲ್ಲಿ ತೆಂಗ್ಕು ತಜುದ್ದೀನ್ 2ನೇ ಗೋಲು ಗಳಿಸಿ 2-0 ಮುನ್ನಡೆಗೆ ಕಾರಣರಾದರು. ತದನಂತರ 24 ಹಾಗೂ 26ನೇ ನಿಮಿಷದಲ್ಲಿ ಭಾರತದ ಪರ ರಮಣ್‌ದೀಪ್ ಸಿಂಗ್ 2 ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು.

ಲಂಡನ್(ಜೂ.23): ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪದಕದ ಕನಸಿಗೆ ತಣ್ಣೀರೆರಚಿದ ಮಲೇಷ್ಯಾ ತಂಡ 2-3 ಗೋಲುಗಳ ಅಂತರದಲ್ಲಿ ಸೋಲಿಸಿ 2018ರ ವಿಶ್ವಕಪ್‌ ಹಾಕಿಗೆ ಅರ್ಹತೆ ಪಡೆದುಕೊಂಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನ್'ಪ್ರೀತ್ ಸಿಂಗ್ ಪಡೆ ಕ್ವಾರ್ಟ'ರ್ ಫೈನಲ್ ಪಂದ್ಯದಲ್ಲಿ ತನಗಿಂತ ಕಡಿಮೆ ಶ್ರೀಣಿ ಹೊಂದಿರುವ ಮಲೇಷ್ಯಾ ವಿರುದ್ಧ ಪರಾಭವ ಹೊಂದಿತು.

ಪಂದ್ಯದ 19ನೇ ನಿಮಿಷದಲ್ಲೇ ಮಲೇಷ್ಯಾ ತಂಡದ ರಾಜಿ ರಹೀಮ್ ಹಾಗೂ 20ನೇ ನಿಮಿಷದಲ್ಲಿ ತೆಂಗ್ಕು ತಜುದ್ದೀನ್ 2ನೇ ಗೋಲು ಗಳಿಸಿ 2-0 ಮುನ್ನಡೆಗೆ ಕಾರಣರಾದರು. ತದನಂತರ 24 ಹಾಗೂ 26ನೇ ನಿಮಿಷದಲ್ಲಿ ಭಾರತದ ಪರ ರಮಣ್‌ದೀಪ್ ಸಿಂಗ್ 2 ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು.

ಆದರೆ ಮೊದಲು ಗೋಲು ಬಾರಿಸಿದ್ದ ರಹೀಮ್ 48ನೀ ನಿಮಿಷದಲ್ಲಿ ಮೂರನೇ ಗೋಲು ಗಳಿಸಿ ಗೆಲುವನ್ನು ತಮ್ಮ ತಂಡದ ಪರವಾಗಿಸಿಕೊಂಡರು.