ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದ ದ್ವಿತೀಯ ದಿನ ವಿಂಡೀಸ್ ಆಲೌಟ್ ಆಗಿದೆ. ಉಮೇಶ್ ಯಾದವ್ ಅದ್ಬುತ ಬೌಲಿಂಗ್‌ನಿಂದ ಟೀಂ ಇಂಡಿಯಾ ಪ್ರವಾಸಿ ವಿಂಡೀಸ್ ತಂಡವನ್ನ ಆಲೌಟ್ ಮಾಡಿದೆ. ಇಲ್ಲಿದೆ ವೆಸ್ಟ್ಇಂಡೀಸ್ ಮೊದಲ ಇನ್ನಿಂಗ್ಸ್ ಅಪ್‌ಡೇಟ್ಸ್
ಹೈದರಾಬಾದ್(ಅ.13): ಭಾರತ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ದಿಟ್ಟ ಹೋರಾಟ ನೀಡಿದೆ. ಮೊದಲ ದಿನ ಹಾಗೂ ದ್ವಿತೀಯ ದಿನದ ಮೊದಲ ಸೆಶನ್ ಬ್ಯಾಟಿಂಗ್ ಮಾಡಿದ ವೆಸ್ಟ್ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗೆ ಆಲೌಟ್ ಆಗಿದೆ.
7 ವಿಕೆಟ್ ನಷ್ಟಕ್ಕೆ 295 ರನ್‌ಗಳೊಂದಿಗೆ 2ನೇ ದಿನದಾಟ ಮುಂದುವರಿಸಿದ ವೆಸ್ಟ್ಇಂಡೀಸ್ ಆರಂಭದಲ್ಲೇ ದೇವೇಂದ್ರ ಬಿಶು ವಿಕೆಟ್ ಕಳೆದುಕೊಂಡಿತು. ಆದರೆ ಅಜೇಯ 98 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದ ರೋಸ್ಟನ್ ಚೇಸ್ ಆಕರ್ಷಕ ಶತಕ ಸಿಡಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 4 ಶತಕ ಸಿಡಿಸಿದ ರೋಸ್ಟನ್ ಚೇಸ್, ಭಾರತೀಯ ಬೌಲರ್‌ಗಳನ್ನ ಕಾಡಿದರು. ಭಾರತ ವಿರುದ್ದ ತವರು ಹಾಗೂ ತವರಿನಾಚೆ ಶತಕ ಸಿಡಿಸಿದ ವೆಸ್ಟ್ಇಂಡೀಸ್‌ನ 14ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಚೇಸ್ ಪಾತ್ರರಾದರು. ಚೇಸ್ 106 ರನ್ ಸಿಡಿಸಿ ಔಟಾದರು. ಶಾನನ್ ಗೇಬ್ರಿಯಲ್ ವಿಕೆಟ್ ಪತನದೊಂದಿದೆ ವೆಸ್ಟ್ಇಂಡೀಸ್ 310 ರನ್‌ಗೆ ಆಲೌಟ್ ಆಯಿತು.
ಭಾರತದ ಪರ ಉಮೇಶ್ ಯಾದವ್ 6 ವಿಕೆಟ್ ಪಡೆದು ಮಿಂಚಿದರು. ಇನ್ನು ಕುಲ್ದೀಪ್ ಯಾದವ್ 3 ಹಾಗೂ ಆರ್ ಅಶ್ವಿನ್ 1 ವಿಕೆಟ್ ಕಬಳಿಸಿದರು.
