ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿದೆ. ಮೂವರು ಬ್ಯಾಟ್ಸ್‌ಮನ್‌ಗಳು ಸೆಂಚುರಿ ಸಿಡಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇಲ್ಲಿದೆ ಟೀಂ ಇಂಡಿಯಾ ಮೊದಲ ಇನ್ನಿಗ್ಸ್ ಹೈಲೈಟ್ಸ್. 

ರಾಜ್‌ಕೋಟ್(ಅ.05):ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 649 ರನ್‌ಗೆ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ದಿನ ಪೃಥ್ವಿ ಶಾ ಶತಕ ಸಿಡಿಸಿದರೆ, ದ್ವಿತೀಯ ದಿನ ನಾಯಕ ವಿರಾಟ್ ಕೊಹ್ಲಿ ಬೆನ್ನಲ್ಲೇ, ರವೀಂದ್ರ ಜಡೇಜಾ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಭಾರತ, ವೆಸ್ಟ್ಇಂಡೀಸ್ ವಿರುದ್ದ ಗರಿಷ್ಠ ಮೊತ್ತ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 

Scroll to load tweet…

ದ್ವಿತೀಯ ದಿನದಾಟದಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್‌ಗಳೊಂದಿಗೆ ಇನ್ನಿಂಗ್ಸ್ ಮುುಂದುವರಿಸಿದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಆಸರೆಯಾದರು. ಇಂಗ್ಲೆಂಡ್ ಪ್ರವಾಸದ ಬಳಿಕ ಇದೀಗ ವಿಂಡೀಸ್ ವಿರುದ್ಧವೂ ಕೊಹ್ಲಿ ಸೆಂಚುರಿ ಸಿಡಿಸಿದರು.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 24ನೇ ಶತಕ ಸಿಡಿಸಿದರು. ಅತ್ಯುತ್ತಮ ಪ್ರದರ್ಶನ ನೀಡಿದ ರಿಷಬ್ ಪಂತ್ 92 ರನ್ ಸಿಡಿಸಿ ಔಟಾದರು. ಇತ್ತ ಕೊಹ್ಲಿ 139 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

ಕೊಹ್ಲಿ ಹಾಗೂ ರಿಷಭ್ ಪಂತ್ ವಿಕೆಟ್ ಪತನದ ನಂತರ ರವೀಂದ್ರ ಜಡೇಜಾ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದರು. ಆದರೆ ಬಾಲಂಗೋಚಿಗಳಿಂದ ಜಡೇಜಾಗೆ ಉತ್ತಮ ಸಾಥ್ ಸಿಗಲಿಲ್ಲ. ಆರ್ ಅಶ್ವಿನ್, ಕುಲ್ದೀಪ್ ಯಾದವ್ ಹಾಗೂ ಉಮೇಶ್ ಯಾದವ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು.

ಮೊಹಮ್ಮದ್ ಶಮಿ ಜೊತೆ ಇನ್ನಿಂಗ್ಸ್ ಮುಂದುವರಿಸಿದ ರವೀಂದ್ರ ಜಡೇಜಾ ಆಕರ್ಷಕ ಶತಕ ದಾಖಲಿಸಿದರು. ಜಡೇಜಾ ತಮ್ಮ ಹೋಮ್‌ಗ್ರೌಂಡ್‌ನವಲ್ಲಿ ಸೆಂಚುರಿ ಸಂಭ್ರಮ ಆಚರಿಸಿದರು. ಜಡೇಜಾ ಶತಕ ಸಿಡಿಸುತ್ತಿದ್ದಂತೆ, ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಿಸಿದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 649 ರನ್ ಸಿಡಿಸಿದೆ.