ಗಯಾನ[ಆ.08]: ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ. ಶಮಿ, ಶ್ರೇಯಸ್ ಸೇರಿದಂತೆ ಐವರು ಕ್ರಿಕೆಟಿಗರು ತಂಡ ಕೂಡಿಕೊಂಡಿದ್ದಾರೆ.

ಇಲ್ಲಿನ ಪ್ರಾವಿಡೆನ್ಸ್ ಮೈದಾನದಲ್ಲಿ ಪಂದ್ಯಕ್ಕೆ ಟಾಸ್’ಗೂ ಮುನ್ನ ಮಳೆ ಅಡ್ಡಿಪಡಿಸಿತು. ಆ ಬಳಿಕ ಪಂದ್ಯವನ್ನು 43 ಓವರ್’ಗಳಿಗೆ ಸೀಮಿತಗೊಳಿಸಲಾಯಿತು. ಚಹಲ್, ಸೈನಿ, ರಾಹುಲ್ ಹಾಗೂ ಮನೀಶ್ ಪಾಂಡೆಗೆ ವಿಶ್ರಾಂತಿ ನೀಡಲಾಗಿದ್ದು, ಶ್ರೇಯಸ್ ಅಯ್ಯರ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ ತಂಡ ಕೂಡಿಕೊಂಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ತಂಡದಿಂದ ಕಿಮೋ ಪೌಲ್, ಓಶಾನೆ ಥಾಮಸ್ ಮತ್ತು ಜಾನ್ ಕ್ಯಾಂಪ್’ಬೆಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. 

ಭಾರತ-ವಿಂಡೀಸ್‌ ನಡುವೆ ಇಂದು ಒನ್ ಡೇ ಫೈಟ್

ಗೇಲ್ ಪಾಲಿಗೆ ಕಡೆಯ ಏಕದಿನ ಸರಣಿ: ಕೆರಬಿಯನ್ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ವೃತ್ತಿಜೀವನದ ಕೊನೆಯ ಏಕದಿನ ಸರಣಿ ಆಡಲು ಸಜ್ಜಾಗಿದ್ದಾರೆ. ಇನ್ನು ಕೇವಲ 13 ರನ್ ಬಾರಿಸಿದರೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ವಿಂಡೀಸ್ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಗೇಲ್ ಪಾತ್ರರಾಗಲಿದ್ದಾರೆ.