ಲೌಡರ್‌ಹಿಲ್(ಆ.03): ವಿಶ್ವಕಪ್ ಟೂರ್ನಿ ಬಳಿಕ  ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ಮತ್ತೆ ಮುಖಾಮುಖಿಯಾಗುತ್ತಿದೆ. ಅಮೆರಿಕಾದ ಲೌಡರ್‌ಹಿಲ್‌ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ಸಹೋದರ ಬಳಿಕ ಚಹಾರ್ ಬ್ರದರ್ಸ್ ಆಡೋ ನಿರೀಕ್ಷೆಗಳಿತ್ತು. ಆದರೆ ದೀಪಕ್ ಚಹಾರ್ ಹಾಗೂ ರಾಹುಲ್ ಚಹಾರ್‌ಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

ಟೀಂ ಇಂಡಿಯಾ:
ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ಮನೀಶ್ ಪಾಂಡೆ, ರಿಷಬ್ ಪಂತ್, ಕ್ರುನಾಲ್ ಪಾಂಡ್ಯ, ರವೀಂದ್ರ ಜಡೇಜಾ. ಭುವನೇಶ್ವರ್ ಕುಮಾರ್, ವಾಶಿಂಗ್ಟನ್ ಸುಂದರ್, ನವದೀಪ್ ಸೈನಿ, ಖಲೀಲ್ ಅಹಮ್ಮದ್

ಭಾರತ ಹಾಗೂ ವೆಸ್ಟ್ ಇಂಡೀಸ್ ದ್ವಿಪಕ್ಷೀಯ ಸರಣಿಯ ಆರಂಭಿಕ 2 ಪಂದ್ಯ ಅಮೆರಿಕಾದಲ್ಲಿ ಆಯೋಜಿಸಲಾಗಿದೆ. ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಲಿದೆ. ವಿಂಡೀಸ್ ವಿರುದ್ಧ ಭಾರತ 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯದ ಸರಣಿ ಆಡಲಿದೆ. ವಿಶ್ವಕಪ್ ಟೂರ್ನಿ ಸೋಲಿನ ಬಳಿಕ ಇದೀಗ ಟೀಂ ಇಂಡಿಯಾ ವಿಂಡೀಸ್ ವಿರುದ್ದ ದ್ವಿಪಕ್ಷೀಯ ಸರಣಿ ಗೆಲ್ಲೋ ವಿಶ್ವಾಸದಲ್ಲಿದೆ.