ವಿಂಡೀಸ್ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಅಂತ್ಯಗೊಂಡಿದೆ. ಅಂತಿಮ ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿದ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್ .
ಚೆನ್ನೈ(ನ.11): ವೆಸ್ಟ್ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯನ್ನ 3-0 ಅಂತರದಲ್ಲಿ ಗೆದ್ದುಕೊಂಡಿದೆ. ಇಷ್ಟೇ ಅಲ್ಲ ಸರಣಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಿಕೋಲಾಸ್ ಪೂರನ್ ಅಜೇಯ 53, ಡರೆನ್ ಬ್ರಾವೋ ಅಜೇಯ 43 ರನ್ ಸಿಡಿಸಿದರು. ಈ ಮೂಲಕ ವಿಂಡೀಸ್ 3 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿತು.
182 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ 4 ರನ್ ಸಿಡಿಸಿ ಔಟಾದರು. ಇನ್ನು ಕೆಎಲ್ ರಾಹುಲ್ 17 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಶಿಖರ್ ಧವನ್ ಹಾಗೂ ರಿಷಬ್ ಪಂತ್ ಅಬ್ಬರಿಸಿದರು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ ಅರ್ಧಶತಕ ಸಿಡಿಸಿ ಮಿಂಚಿದರು. ಇತ್ತ ಧವನ್‌ಗೆ ಉತ್ತಮ ಸಾಥ್ ನೀಡಿದ ಪಂತ್ ಹಾಫ್ ಸೆಂಚುರಿ ಭಾರಿಸಿದರು. ಈ ಮೂಲಕ ಮೊದಲ ಅರ್ಧಶತಕದ ಸಂಭ್ರಮ ಆಚರಿಸಿದರು.
ರಿಷಬ್ ಪಂತ್ 58 ರನ್ ಸಿಡಿಸಿ ಔಟಾದರು. ಗೆಲವಿಗೆ ಇನ್ನು 1 ರನ್ ಬೇಕಿರುವಾಗ 92 ರನ್ ಸಿಡಿಸಿದ ಧವನ್ ವಿಕೆಟ್ ಪತನಗೊಂಡಿತು. ಈ ಮೂಲಕ ಅಭಿಮಾನಿಗಳ ಆತಂಕ ಹೆಚ್ಚಾಾಯಿತು. ಅಂತಿಮ ಎಸೆತದಲ್ಲಿ ಮನೀಶ್ ಪಾಂಡೆ ಗೆಲುವಿನ ರನ್ ಸಿಡಿಸಿ ಆತಂಕ ದೂರ ಮಾಡಿದರು. ಈ ಮೂಲಕ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇಷ್ಟೇ ಅಲ್ಲ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಗೆದ್ದು ಕ್ಲೀನ್ ಸ್ವೀಪ್ ಮಾಡಿಕೊಂಡಿತು.