ತಿರುವನಂತಪುರಂ(ನ.01): ಭಾರತ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ನಿರ್ಣಾಯಕ ಪಂದ್ಯದಲ್ಲಿ ವಿಂಡೀಸ್ ಕೇವಲ 31.5 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾಗೆ 105 ರನ್ ಟಾರ್ಗೆಟ್ ನೀಡಿದೆ.

 

 

ಗ್ರೀನ್‌ಫೀಲ್ಡ್ ಕ್ರೀಡಾಂಗಣದ ಬ್ಯಾಟಿಂಗ್ ಪಿಚ್‌ನಲ್ಲಿ ಟಾಸ್ ಗೆದ್ದು ವಿಂಡೀಸ್ ಬ್ಯಾಟಿಂಗ್ ಇಳಿಯಿತು. ಆದರೆ ವೆಸ್ಟ್ ಇಂಡೀಸ್ ಮಾತ್ರ ಚೇತರಿಸಿಕೊಳ್ಳಲಿಲ್ಲ. ರನ್ ಖಾತೆ ತೆರೆಯೋ ಮೊದಲೇ ಕೀರನ್ ಪೊವೆಲ್ ಪೆವಿಲಿಯನ್ ಸೇರಿಕೊಂಡರು.

ಶೈ ಹೋಪ್ ಶೂನ್ಯ ಸುತ್ತಿದರೆ, ಮರ್ಲಾನ್ ಸ್ಯಾಮ್ಯುಯೆಲ್ಸ್ 24 ರನ್ ಸಿಡಿಸಿ ಔಟಾದರು. ಶಿಮ್ರೊನ್ ಹೆಟ್ಮೆಯರ್ ರೊಮೆನ್ ಪೊವೆಲ್ ಹಾಗೂ ಫ್ಯಾಬಿನ್ ಅಲೆನ್ ಮತ್ತೆ ನಿರಾಸೆ ಅನುಭವಿಸಿದರು.

ನಾಯಕ ಜಾಸನ್ ಹೋಲ್ಡರ್ 25 ರನ್ ಕಾಣಿಕೆ ನೀಡಿದರು. ಇದು ವಿಂಡೀಸ್ ತಂಡದದ ವೈಯುಕ್ತಿಕ ಗರಿಷ್ಠ ಮೊತ್ತ. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಒಶಾನೆ ಥೋಮಸ್ ವಿಕೆಟ್ ಪತನದೊಂದಿಗೆ ವೆಸ್ಟ್ ಇಂಡೀಸ್ 31.5 ಓವರ್‌ಗಳಲ್ಲಿ 104 ಆಲೌಟ್ ಆಯಿತು. ಭಾರತದ ಪರ ರವೀಂದ್ರ ಜಡೇಜಾ 4 ,ಖಲೀಲ್ ಅಹಮ್ಮದ್ 2, ಜಸ್‌ಪ್ರೀತ್ ಬುಮ್ರಾ 2,  ವಿಕೆಟ್ ಕಬಳಿಸಿದರು.