ಲೌಡರ್‌ಹಿಲ್(ಆ.04): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಗೆಲುವಿನತ್ತ ಹೆಜ್ಜೆ ಹಾಕಿದ್ದ ಟೀಂ ಇಂಡಿಯಾಗೆ ನಿರಾಸೆಯಾಗಿದೆ. ಮೋಡ ಕವಿದ ವಾತಾವರಣದಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತು. ಸದ್ಯ ಮಳೆ ಅಡ್ಡಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಡಕ್ವರ್ತ್ ನಿಯಮ ಅನ್ವಯಿಸಿದರೆ ಭಾರತ ಮೇಲುಗೈ ಸಾಧಿಸಲಿದೆ. ಡಕ್ವರ್ತ್ ನಿಯಮದ ಪ್ರಕಾರ ಸದ್ಯ ವಿಂಡೀಸ್ 120 ರನ್ ಗಳಿಸರಬೇಕಿತ್ತು. ಆದರೆ ವೆಸ್ಟ್ ಇಂಡೀಸ್ 4 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿದೆ.

ರೋವ್ಮಾನ್ ಪೊವೆಲ್ ಸಿಡಿಸಿದ ಅರ್ಧಶತಕದಿಂದ ವೆಸ್ಟ್ ಇಂಡೀಸ್ ದಿಟ್ಟ ಹೋರಾಟ ನೀಡಿತ್ತು. ಆದರೆ ಪೊವೆಲ್ ಔಟಾಗುತ್ತಿದ್ದಂತೆ ವಿಂಡೀಸ್ ಅತಂಕ ಹೆಚ್ಚಾಯಿತು. ಇದೇ ವೇಳೆ ಮೋಡ ಕವಿದ ವಾತಾವರಣದಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತು. 

15.3 ಓವರ್‌ಗಳಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿತ್ತು.  ಗೆಲುವಿಗೆ ಇನ್ನೂ27 ಎಸೆತದಲ್ಲಿ 70 ರನ್ ಅವಶ್ಯಕತೆ ಇತ್ತು. ಅಷ್ಟರಲ್ಲೇ ಬ್ಯಾಡ್ ವೆದರ್ ಕಾರಣ ಪಂದ್ಯ ಸ್ಥಗಿತಗೊಂಡಿತು. ಇದೀಗ ಮಳೆ ಅಡ್ಡಿಯಾಗಿದೆ. ಹೀಗಾಗಿ ಪಂದ್ಯ ಪುನರ್ ಆರಂಭ ವಿಳಂಬವಾಗಲಿದೆ.