ಡಿಸೆಂಬರ್ ವೇಳೆ ಉತ್ತರಭಾರತದಲ್ಲಿ ಸಾಕಷ್ಟು ಚಳಿ ಇರುವುದರಿಂದ ಆಟಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ. ಬಿಸಿಸಿಐನ ಈ ಸಮಯೋಚಿತ ನಿರ್ಧಾರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಮುಂಬೈ(ನ.19):  ಭಾರತ-ಶ್ರೀಲಂಕಾ ನಡುವಿನ ಮೊದಲೆರಡು ಏಕದಿನ ಪಂದ್ಯಗಳು ಕ್ರಮವಾಗಿ ಧರ್ಮಶಾಲಾ ಹಾಗೂ ಮೊಹಾಲಿಯಲ್ಲಿ ನಡೆಯುತ್ತಿದ್ದು ವೇಳಾಪಟ್ಟಿಯಲ್ಲಿ ಅಲ್ಪಬದಲಾವಣೆಯನ್ನು ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಈ ಪಂದ್ಯಗಳು ಹಗಲು ರಾತ್ರಿಯ ಪಂದ್ಯಗಳಾಗಿರುವುದರಿಂದ ಎರಡು ಗಂಟೆ ಮುಂಚಿತವಾಗಿ ಪಂದ್ಯಗಳು ಜರುಗಲಿವೆ ಎಂದು ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಕಾಮೆಂಟ್ರಿ ಹೇಳುವಾಗ ತಿಳಿಸಿದ್ದಾರೆ. ಮಧ್ಯಾಹ್ನ 1.30ರಿಂದ ಆರಂಭವಾಗಬೇಕಿದ್ದ ಪಂದ್ಯಗಳು ಬೆಳಗ್ಗೆ 11.30ಕ್ಕೆ ಆರಂಭವಾಗುವ ಸಾಧ್ಯತೆಯಿದೆ.

ಡಿಸೆಂಬರ್ ವೇಳೆ ಉತ್ತರಭಾರತದಲ್ಲಿ ಸಾಕಷ್ಟು ಚಳಿ ಇರುವುದರಿಂದ ಆಟಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ. ಬಿಸಿಸಿಐನ ಈ ಸಮಯೋಚಿತ ನಿರ್ಧಾರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಹಾಲಿ ಈಡನ್ ಗಾರ್ಡನ್'ನಲ್ಲಿ ಭಾರತ-ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಆ ಬಳಿಕ ನಾಗ್ಪುರ ಹಾಗೂ ಡೆಲ್ಲಿಯಲ್ಲಿ ಮುಂದಿನ ಎರಡು ಪಂದ್ಯಗಳು ನಡೆಯಲಿವೆ. ಆ ಬಳಿಕ 3 ಒನ್'ಡೇ ಪಂದ್ಯಗಳು ಕ್ರಮವಾಗಿ ಧರ್ಮಶಾಲಾ, ಮೊಹಾಲಿ ಹಾಗೂ ವೈಜಾಂಗ್'ನಲ್ಲಿ ನಡೆಯಲಿದ್ದು, ನಂತರ ಟಿ20 ಪಂದ್ಯಗಳು ಕಟಕ್, ಇಂಡೋರ್ ಮತ್ತು ಮುಂಬೈನಲ್ಲಿ ನಡೆಯಲಿವೆ.