ವಿಶಾಖಪಟ್ಟಣಂ(ಅ.03): ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.   ದ್ವಿತೀಯ ದಿನದಾಟದಲ್ಲಿ ಭಾರತ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮಯಾಂಕ್ ಅಗರ್ವಾಲ್ ಡಬಲ್ ಸೆಂಚುರಿ ಹಾಗೂ ರೋಹಿತ್ ಶರ್ಮಾ 176 ರನ್ ಸಿಡಿಸೋ ಮೂಲಕ ಭಾರತ ಚಹಾ ವಿರಾಮದ ವೇಳೆ 5 ವಿಕೆಟ್ ನಷ್ಟಕ್ಕೆ 450 ರನ್ ಸಿಡಿಸಿತು.

 

ಇದನ್ನೂ ಓದಿ: ವೈಜಾಗ್ ಟೆಸ್ಟ್: ದ್ವಿಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್

ವಿಕೆಟ್ ನಷ್ಟವಿಲ್ಲದೆ ಎರಡನೇ ದಿನದಾಟ ಮುಂದುವರಿಸಿದ ಟೀಂ ಇಂಡಿಯಾಗೆ ರೋಹಿತ್ ಹಾಗೂ ಮಯಾಂಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರೋಹಿತ್ 176 ರನ್ ಸಿಡಿಸಿ ಔಟಾದರೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದರು.

ಆರಂಭಿಕರಿಬ್ಬರು ಅಬ್ಬರಿಸಿದರೆ, ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಪೂಜಾರ ಕೇವಲ 6 ರನ್  ಸಿಡಿಸಿ ಔಟಾದರೆ, ಕೊಹ್ಲಿ 20 ಹಾಗೂ ಅಜಿಂಕ್ಯ ರಹಾನೆ 15 ರನ್ ಸಿಡಿಸಿ ನಿರ್ಗಮಿಸಿದರು. 

ರವೀಂದ್ರ ಜಡೇಜಾ ಹಾಗೂ ಹನುಮಾ ವಿಹಾರಿ ಸದ್ಯ ಕ್ರಿಸ್ ಕಾಯ್ದುಕೊಂಡಿದ್ದಾರೆ. ಟಿ ಬ್ರೇಕ್ ವೇಳೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 450 ರನ್ ಸಿಡಿಸಿದೆ.