ಧರ್ಮಶಾಲಾ(ಸೆ.15): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಸುರಿಯುತ್ತಿರುವ ಮಳೆಯಿಂದ ಟಾಸ್ ಪ್ರಕ್ರಿಯೆ ವಿಳಂಬವಾಗಿದೆ. ಧರ್ಮಶಾಲಾದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಭಯ ತಂಡಗಳ ಅಭ್ಯಾಸಕ್ಕೂ ತೊಡಕಾಗಿತ್ತು. ಇದೀಗ ಪಂದ್ಯಕ್ಕೆ ಆರಂಭಕ್ಕೂ ಮಳೆ ಅಡ್ಡಿಯಾಗಿದೆ.

 

ಮಳೆಯಿಂದಾಗಿ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಆದರೆ ಸಿಬ್ಬಂಧಿಗಳ ಸತತ ಪ್ರಯತ್ನದಿಂದ ಮೈದಾನ ಸಜ್ಜುಗೊಳಿಸಲಾಗಿತ್ತು. ಆದರೆ ಪಂದ್ಯ ಆರಂಭಕ್ಕೆ ಕೆಲವೇ ಕ್ಷಣಗಳಿಗೂ ಮುನ್ನ ಮತ್ತೆ ಮಳೆ ಆರಂಭಗೊಂಡಿತು. ಹೀಗಾಗಿ ಪಂದ್ಯ ಆರಂಭ ತಡವಾಗಲಿದೆ.

 

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಸರಣಿ ಸೆ.15 ರಿಂದ ಆರಂಭವಾಗಲಿದೆ. 3 ಟಿ20 ಹಾಗೂ 3 ಟೆಸ್ಟ್ ಪಂದ್ಯದ ಸರಣಿಗಾಗಿ ಸೌತ್ ಆಫ್ರಿಕಾ, ಭಾರತಕ್ಕೆ ಆಗಮಿಸಿದೆ.