ಭಾರತ-ಪಾಕಿಸ್ತಾನ ಏಕದಿನ ಪಂದ್ಯಗಳ ನಡುವಿನ ಕೆಲವು ಸ್ವಾರಸ್ಯಕರ ಅಂಕಿ-ಅಂಶಗಳು ನಿಮ್ಮ ಮುಂದೆ...
ಬೆಂಗಳೂರು(ಜೂ.17): ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದರೂ, ಪಾಕಿಸ್ತಾನ ಮಾತ್ರ ಈಗಲೂ ಪೇಪರ್ ಮೇಲಿನ ಹುಲಿ ಎನಿಸಿಕೊಂಡಿದೆ. ಪಾಕಿಸ್ತಾನ ಹಾಗೂ ಭಾರತ ನಡುವಿನ ಏಕದಿನ ಪಂದ್ಯಗಳಲ್ಲಿ ಬಹುತೇಕ ದಾಖಲೆಗಳು ಪಾಕಿಸ್ತಾನ ತನ್ನದಾಗಿಸಿಕೊಂಡಿದೆ.
ಭಾರತ-ಪಾಕಿಸ್ತಾನ ಏಕದಿನ ಪಂದ್ಯಗಳ ನಡುವಿನ ಕೆಲವು ಸ್ವಾರಸ್ಯಕರ ಅಂಕಿ-ಅಂಶಗಳು ನಿಮ್ಮ ಮುಂದೆ...
- ಇದುವರೆಗೆ ಉಭಯ ತಂಡಗಳು ಒಟ್ಟು 128 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 52 ಪಂದ್ಯದಲ್ಲಿ ಜಯಸಾಧಿಸಿದರೆ, ಪಾಕಿಸ್ತಾನ 72 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ನಾಲ್ಕು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಮುಕ್ತಾಯಕಂಡಿವೆ.
- ಉಭಯ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, 2:2ರ ಗೆಲುವಿನ ಸಮಬಲ ಸಾಧಿಸಿವೆ.
- ಭಾರತ ತಂಡವು ಪಾಕ್ ವಿರುದ್ಧ ತಾನಾಡಿದ ಎಲ್ಲಾ 11 ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಸಾಮ್ರಾಟನಾಗಿ ಮೆರೆದಿದೆ.
- ಭಾರತ-ಪಾಕಿಸ್ತಾನ ತಂಡಗಳು ಫೈನಲ್'ನಲ್ಲಿ ಒಟ್ಟು 10 ಬಾರಿ ಮುಖಾಮುಖಿಯಾಗಿದ್ದು, ಪಾಕಿಸ್ತಾನ 7 ಬಾರಿ ಚಾಂಪಿಯನ್ ಆಗಿದ್ದರೆ, ಭಾರತ ಗೆದ್ದಿದ್ದು ಮಾತ್ರ ಮೂರು ಬಾರಿ.
- ಪಾಕಿಸ್ತಾನ ವಿರುದ್ಧ ಸಚಿನ್ ತೆಂಡುಲ್ಕರ್ ಗರಿಷ್ಟ ರನ್ ದಾಖಲಿಸಿದ ಶ್ರೇಯ ಹೊಂದಿದ್ದಾರೆ. ಸಚಿನ್ ಪಾಕ್ ವಿರುದ್ಧ ಒಟ್ಟು 67 ಏಕದಿನ ಪಂದ್ಯಗಳನ್ನಾಡಿದ್ದು, 40.09ರ ಸರಾಸರಿಯಲ್ಲಿ 2403ರನ್ ಕಲೆಹಾಕಿದ್ದಾರೆ.
- ಟೀಂ ಇಂಡಿಯಾ ಎದುರು ಇಂಜಮಾಮ್-ಉಲ್-ಹಕ್ ಗರಿಷ್ಟ ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಇಂಜಮಾಮ್ ಒಟ್ಟು 67 ಏಕದಿನ ಪಂದ್ಯಗಳಲ್ಲಿ 43.69ರ ಸರಾಸರಿಯಲ್ಲಿ 2403ರನ್ ಬಾರಿಸಿದ್ದಾರೆ.
- ಪಾಕ್ ವಿರುದ್ಧ ಗರಿಷ್ಟ ವಯುಕ್ತಿಕ ಗರಿಷ್ಟ ರನ್ ಚಚ್ಚಿದ ದಾಖಲೆ ವಿರಾಟ್ ಕೊಹ್ಲಿ(183 ರನ್) ಹೆಸರಿನಲ್ಲಿದೆ.
- ಇನ್ನು ಭಾರತದ ವಿರುದ್ಧ ಗರಿಷ್ಟ ವೈಯುಕ್ತಿಕ ಗರಿಷ್ಟ ರನ್ ಬಾರಿಸಿದ ದಾಖಲೆ ಸಯೀದ್ ಅನ್ವರ್(194 ರನ್) ಹೆಸರಿನಲ್ಲಿದೆ.
- ಅನಿಲ್ ಕುಂಬ್ಳೆ ಪಾಕ್ ವಿರುದ್ಧ ಅತಿ ಹೆಚ್ಚು ವಿಕೆಟ್ ಕಬಳಿಸಿದ(54 ವಿಕೆಟ್) ಭಾರತೀಯ ಬೌಲರ್ ಎನಿಸಿದ್ದಾರೆ.
- ಪಾಕಿಸ್ತಾನದ ವಾಸೀಂ ಅಕ್ರಂ ಭಾರತ ವಿರುದ್ಧ 60 ವಿಕೆಟ್ ಪಡೆದು ಟೀಂ ಇಂಡಿಯಾಗೆ ಆಘಾತ ನೀಡಿದ್ದರು.
