ವಿರಾಟ್ ಕೊಹ್ಲಿ ದ್ವಿಶತಕ ಹಾಗೂ ಅಜಿಂಕ್ಯ ರಹಾನೆ ಶತಕ ಗಳಿಸಿದ್ದು ಇಂದಿನ ಎರಡನೇ ದಿನದಾಟದ ಹೈಲೈಟ್ಸ್. ಮೊದಲ ದಿನದಾಟದಂತ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿದ್ದ ಭಾರತ ಎರಡನೇ ದಿನದಂದು ರನ್'ಗಳ ಹೊಳೆ ಹರಿಸುವುದನ್ನು ಮುಂದುವರಿಸಿತು. ಕೊಹ್ಲಿ ಮತ್ತು ರಹಾನೆ ಪಾರ್ಟ್ನರ್'ಶಿಪ್ ಬೆಳೆಯುತ್ತಾ ಹೋಯಿತು. ಇವರಿಬ್ಬರು 4ನೇ ವಿಕೆಟ್'ಗೆ 365 ರನ್ ಜೊತೆಯಾಟದಲ್ಲಿ ಭಾಗಿಯಾದರು.
ಇಂದೋರ್(ಅ. 09): ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆಯವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತನ್ನ ಮೊದಲ ಇನ್ನಿಂಗ್ಸಲ್ಲಿ 5 ವಿಕೆಟ್ ನಷ್ಟಕ್ಕೆ 557 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಎರಡನೇ ದಿನಾಂತ್ಯದಲ್ಲಿ ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ.
ವಿರಾಟ್ ಕೊಹ್ಲಿ ದ್ವಿಶತಕ ಹಾಗೂ ಅಜಿಂಕ್ಯ ರಹಾನೆ ಶತಕ ಗಳಿಸಿದ್ದು ಇಂದಿನ ಎರಡನೇ ದಿನದಾಟದ ಹೈಲೈಟ್ಸ್. ಮೊದಲ ದಿನದಾಟದಂತ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿದ್ದ ಭಾರತ ಎರಡನೇ ದಿನದಂದು ರನ್'ಗಳ ಹೊಳೆ ಹರಿಸುವುದನ್ನು ಮುಂದುವರಿಸಿತು. ಕೊಹ್ಲಿ ಮತ್ತು ರಹಾನೆ ಪಾರ್ಟ್ನರ್'ಶಿಪ್ ಬೆಳೆಯುತ್ತಾ ಹೋಯಿತು. ಇವರಿಬ್ಬರು 4ನೇ ವಿಕೆಟ್'ಗೆ 365 ರನ್ ಜೊತೆಯಾಟದಲ್ಲಿ ಭಾಗಿಯಾದರು. ಇದು ನಾಲ್ಕನೇ ವಿಕೆಟ್'ಗೆ ಹೊಸ ಭಾರತೀಯ ದಾಖಲೆ ಎನಿಸಿದೆ. ವಿರಾಟ್ ಕೊಹ್ಲಿ 211 ರನ್ ಗಳಿಸಿ ಎರಡನೇ ದ್ವಿಶತಕದ ಮೆರುಗು ಪಡೆದರು. ಎರಡು ದ್ವಿಶತಕ ಭಾರಿಸಿದ ಮೊದಲ ಭಾರತೀಯ ಕ್ಯಾಪ್ಟನ್ ಎನಿಸಿದರು. ಕೊಹ್ಲಿ ನಿರ್ಗಮನದ ಬಳಿಕ ಸ್ವಲ್ಪ ಹೊತ್ತಿನಲ್ಲಿ ಅಜಿಂಕ್ಯ ರಹಾನೆ ಕೂಡ ಔಟಾದರು. ದ್ವಿಶತಕದತ್ತ ದಾಪುಗಾಲಿಕ್ಕುತ್ತಿದ್ದ ರಹಾನೆ 188 ರನ್'ಗೆ ಔಟಾದರು. ರಹಾನೆ ಔಟಾದ ಬಳಿಕ ರೋಹಿತ್ ಶರ್ಮಾ ಬಿಡುಬೀಸಾಗಿ ಬ್ಯಾಟಿಂಗ್ ಮಾಡಿ ಸ್ಕೋರ್'ಬೋರ್ಡ್'ಗೆ ಚುರುಕು ಮುಟ್ಟಿಸಿದರು. ಕೇವಲ 63 ಎಸೆತದಲ್ಲಿ 51 ರನ್ ಚಚ್ಚಿದರು. ಶರ್ಮಾ ಅರ್ಧಶತಕ ಮುಟ್ಟುತ್ತಿದ್ದಂತೆಯೇ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿದರು.
ದಿನದ ಕೊನೆಯಲ್ಲಿ ನ್ಯೂಜಿಲೆಂಡ್'ನ ಒಂದಾದರೂ ವಿಕೆಟ್ ಪಡೆಯುವ ಗುರಿಯಲ್ಲಿ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಆದರೆ, ಕೊಹ್ಲಿ ನಿರೀಕ್ಷೆ ಈಡೇರಲಿಲ್ಲ. ಮಾರ್ಟಿನ್ ಗುಪ್ಟಿಲ್ ಮತ್ತು ಟಾಮ್ ಲಾಥಮ್ ಯಾವುದೇ ಅವಘಡಕ್ಕೆ ಆಸ್ಪದ ಕೊಡದೇ ಸುರಕ್ಷಿತವಾಗಿ ದಿನದಾಟ ಮುಗಿಸಿದರು.
ಸ್ಕೋರು ವಿವರ(2ನೇ ದಿನದಾಟ):
ಭಾರತ ಮೊದಲ ಇನ್ನಿಂಗ್ಸ್ 169 ಓವರ್ 557/5(ಡಿಕ್ಲೇರ್)
(ವಿರಾಟ್ ಕೊಹ್ಲಿ 211, ಅಜಿಂಕ್ಯ ರಹಾನೆ 188, ರೋಹಿತ್ ಶರ್ಮಾ 51, ಚೇತೇಶ್ವರ್ ಪೂಜಾರ 41, ಗೌತಂ ಗಂಭೀರ್ 29 ರನ್ - ಟ್ರೆಂಟ್ ಬೌಲ್ಟ್ 113/2, ಜೀತನ್ ಪಟೇಲ್ 120/2)
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 28/0
(ಮಾರ್ಟಿನ್ ಗುಪ್ಟಿಲ್ ಅಜೇಯ 17)
