ಸೌತಾಂಪ್ಟನ್(ಸೆ.02): ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 19ನೇ ಅರ್ಧಶತಕ ಪೂರೈಸಿದರು.

 

 

ಗೆಲುವಿಗೆ 245 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಶೂನ್ಯ ಸುತ್ತಿದ್ದರು.  ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಚೇತೇಶ್ವರ್ ಪೂಜಾರ  2ನೇ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್ ಸಿಡಿಸಿ ಔಟಾದರು.

3 ಬೌಂಡರ್ ಸಿಡಿಸಿ ಉತ್ತಮ ಪ್ರದರ್ಶನ ನೀಡೋ ಸೂಚನೆ ನೀಡಿದ ಶಿಖರ್ ಧವನ್ 17  ರನ್ ಸಿಡಿಸಿ ಔಟಾದರು.  ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಚೇತರಿಕೆ ನೀಡಿದರು.

ಅದ್ಬುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಆಸರೆಯಾಗಿದ್ದಾರೆ. ಕೊಹ್ಲಿಗೆ ಅಜಿಂಕ್ಯ ರಹಾನೆ ಕೂಡ ಉತ್ತಮ ಸಾಥ್ ನೀಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಇದೀಗ 3 ವಿಕೆಟ್ ನಷ್ಟಕ್ಕೆ 114 ರನ್ ಸಿಡಿಸಿದೆ. ಈ ಮೂಲಕ ಗೆಲುವಿಗೆ 131 ರನ್‌ಗಳ ಅವಶ್ಯಕತೆ ಇದೆ.