ಓವಲ್(ಸೆ.08): ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದ ಆರಂಭದಲ್ಲೇ ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ವಿಕೆಟ್ ಕಬಳಿಸಿದರು. ಈ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟರು.

ಆದಿಲ್ ರಶೀದ್ 15 ರನ್ ಸಿಡಿಸಿ ಔಟಾದರು. ರಶೀದ್ ವಿಕೆಟ್ ಕಬಳಿಸಿದ ಟೀಂ ಇಂಡಿಯಾ ಹೊಸ ದಾಖಲೆ ಬರೆಯಿತು. ಇದೀಗ ಸರಣಿಯೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತೀಯ ವೇಗಿಗಳ ದಾಖಲೆ ಪುಡಿ ಮಾಡಿತು.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ  ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ವೇಗಿಗಳು ಇದುವರೆಗೆ 59 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ 1979-80ರಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾದ ವೇಗಿಗಳು ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ 58 ವಿಕೆಟ್ ಕಬಳಿಸಿತ್ತು.

ಸರಣಿಯಲ್ಲಿ ವೇಗಿಗಳ ಗರಿಷ್ಠ ವಿಕೆಟ್ ಸಾಧನೆ

59 vs ಇಂಗ್ಲೆಂಡ್, 2018 (ಇಶಾಂತ್ 18, ಶಮಿ 14, ಬುಮ್ರಾ 14, ಹಾರ್ದಿಕ್ 10, ಉಮೇಶ್ 3)
58 vs ಪಾಕಿಸ್ತಾನ, 1979-80(ಕಪಿಲ್ 32, ಗಾವ್ರಿ 15, ಬಿನ್ನಿ 11)
57 vs ಆಸ್ಟ್ರೇಲಿಯಾ, 1991-92(ಕಪಿಲ್ 25,ಪ್ರಭಾಕರ್ 19, ಶ್ರೀನಾಥ್ 10, ಬ್ಯಾನರ್ಜಿ 3)