ನಾಟಿಂಗ್‌ಹ್ಯಾಮ್(ಆ.19): ಇಂಗ್ಲೆಂಡ್ ವಿರುದ್ದದ 3ನೇ ಟೆಸ್ಟ್ ಪಂದ್ಯದ ದ್ವಿತೀಯ ದಿನ ಬ್ಯಾಟಿಂಗ್ ಮುಂದುವರಿಸಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕೈಚೆಲ್ಲಿದೆ. ಮಳೆಯಿಂದಾಗಿ ತಡವಾಗಿ ಆರಂಭಗೊಂಡ ದಿನದಾಟದಲ್ಲಿ 307 ರನ್‌ಗಳೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಭಾರತ, ಇದೀಗ 2 ವಿಕೆಟ್ ಕಳೆದುಕೊಂಡಿದೆ.

ಚೊಚ್ಚಲ ಪಂದ್ಯ ಆಡುತ್ತಿರುವ ರಿಷಬ್ ಪಂತ್ 24 ರನ್ ಸಿಡಿಸಿ ಔಟಾದರು. ದಿನೇಶ್ ಕಾರ್ತಿಕ್ ಬದಲು ಅವಕಾಶ ಪಡೆದ ಪಂತ್, ಮೊದಲ ದಿನದಲ್ಲಿ ಭರವಸೆ ಮೂಡಿಸಿದ್ದರು. ಭರ್ಜರಿ ಸಿಕ್ಸರ್ ಮೂಲಕ ರನ್ ಖಾತೆ ಆರಂಭಿಸಿದ ಪಂತ್, ಇಂದು ರನ್‌ಗಳಿಸಲು ಸಾಧ್ಯವಾಗಲಿಲ್ಲ. ಆರ್ ಅಶ್ವಿನ್ 3 ಬೌಂಡರಿ ಮೂಲಕ 14 ರನ್ ಸಿಡಿಸಿ ಔಟಾದರು. ಈ ಮೂಲಕ ಭಾರತ 8ನೇ ವಿಕೆಟ್ ಕಳೆದುಕೊಂಡಿದೆ. 

ಮೊದಲ ದಿನದಾಟದಲ್ಲಿ ಆರಂಭಿಕರಾದ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ 60 ರನ್‌ಗಳ ಜೊತೆಯಾಟ ನೀಡಿದ್ದರು. ಇನ್ನು ನಾಯಕ ವಿರಾಟ್ ಕೊಹ್ಲಿ 97 ರನ್ ಸಿಡಿಸಿದರೆ,  ಅಜಿಂಕ್ಯ ರಹಾನೆ 81 ರನ್ ಕಾಣಿಕೆ ನೀಡಿದ್ದರು.