5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ-ಯಾರು ಇನ್?ಯಾರು ಔಟ್?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 7:08 PM IST
India vs england test joe root announced  team  for 5th test
Highlights

ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡ ಪ್ರಕಟಿಸಿದೆ. ತಂಡದಲ್ಲಿ ಉಳಿದುಕೊಂಡವರು ಯಾರು? ವಿದಾಯ ಪಂದ್ಯ ಆಡಲು ಸಜ್ಜಾದ ಅಲಿಸ್ಟೈರ್ ಕುಕ್‌ಗೆ ಸ್ಥಾನ ನೀಡಲಾಗಿದೆಯಾ? ಇಲ್ಲಿದೆ ವಿವರ.

ಲಂಡನ್(ಸೆ.06): ಭಾರತ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಲಾಗಿದೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ಜೋ ರೂಟ್ 11 ಆಟಗಾರರ ತಂಡ ಪ್ರಕಟಿಸಿದರು.

3-1 ಅಂತರದಲ್ಲಿ ಸರಣಿ ಗೆದ್ದಿರುವ ಇಂಗ್ಲೆಂಡ್ ಇದೀಗ 5ನೇ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಹೀಗಾಗಿ ಇಂಗ್ಲೆಂಡ್ ಅಂತಿಮ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಅಲಿಸ್ಟೈರ್ ಕುಕ್‌ಗೆ ಇದು ವಿದಾಯದ ಪಂದ್ಯ. ಹೀಗಾಗಿ ಗೆಲುವಿನ ವಿದಾಯ ನೀಡಲು ಇಂಗ್ಲೆಂಡ್ ನಿರ್ಧರಿಸಿದೆ. ಕಳೆದ ಪಂದ್ಯದಲ್ಲಿ ಸ್ಪಿನ್ ದಾಳಿ ಮೂಲಕ ಭಾರತಕ್ಕೆ ಕಂಟಕವಾದ ಮೊಯಿನ್ ಆಲಿ ಇದೀಗ ಮತ್ತೊಮ್ಮೆ ಸಂಕಷ್ಟ ತರೋ ಸಾಧ್ಯತೆ ಇದೆ.

ಇಂಗ್ಲೆಂಡ್ ತಂಡ:

ಜೂ ರೂಟ್(ನಾಯಕ),ಅಲಿಸ್ಟೈರ್ ಕುಕ್, ಕೆಟನ್ ಜೆನ್ನಿಂಗ್ಸ್, ಮೊಯಿನ್ ಆಲಿ, ಜಾನಿ ಬೈರ್‌ಸ್ಟೋ,  ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರ್ರನ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

loader