ಭಾರತ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಇದೀಗ ಕುತೂಹಲ ಘಟ್ಟ ತಲುಪಿದೆ. 3ನೇ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಮುಂದುವರಿಸಿರುವ ಇಂಗ್ಲೆಂಡ್ ತಂಡಕ್ಕೆ, ಕೊಹ್ಲಿ ಸೈನ್ಯ ಕಠಿಣ ಸವಾಲು ಒಡ್ಡಿದೆ. ಇಲ್ಲಿದೆ 3ನೇ ದಿನದದ ಅಪ್‌ಡೇಟ್ಸ್ 

ಸೌತಾಂಪ್ಟನ್(ಸೆ.01): ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ತೃತೀಯ ದಿನ ಉಭಯ ತಂಡಗಳು ಕಠಿಣ ಹೋರಾಟ ನೀಡುತ್ತಿದೆ. ದಿನದಾಟದ ಆರಂಭದಲ್ಲಿ 5 ವಿಕೆಟ್ ಕಬಳಿಸಿದ ಭಾರತ ಮೇಲುಗೈ ಸಾಧಿಸಿದ್ದರೆ, ಇದೀಗ ಇಂಗ್ಲೆಂಡ್ ಚೇತರಿಕೆ ಕಂಡಿದೆ. ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಜೊತೆಯಾಟದಿಂದ ಇಂಗ್ಲೆಂಡ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದೆ. ಈ ಜೋಡಿಯನ್ನ ಬೇರ್ಪಡಿಸಲು ಟೀಂ ಇಂಡಿಯಾ ಕಠಿಣ ಹೋರಾಟ ನೀಡುತ್ತಿದೆ.

Add Asianetnews Kannada as a Preferred SourcegooglePreferred

ತೃತೀಯ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಮುಂದುವರಿಸಿದೆ ಇಂಗ್ಲೆಂಡ್ ಆರಂಭದಲ್ಲೇ ಆಲಿಸ್ಟೈರ್ ಕುಕ್ ವಿಕೆಟ್ ಕಳೆದುಕೊಂಡಿತು. 12 ರನ್ ಸಿಡಿಸಿ ಕುಕ್ ಪೆವಿಲಿಯನ್ ಸೇರಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಮೊಯಿನ್ ಆಲಿ 9 ರನ್ ಸಿಡಿಸಿ ಇಶಾಂತ್‌ಗೆ ವಿಕೆಟ್ ಒಪ್ಪಿಸಿದರು.

ಕೆಟನ್ ಜೆನ್ನಿಂಗ್ಸ್ ಹಾಗೂ ನಾಯಕ ಜೋ ರೂಟ್ ಜೊತೆಯಾಟದಿಂದ ಇಂಗ್ಲೆಂಡ್ ಚೇತರಿಕೆ ಕಂಡಿತ್ತು. ಆದರೆ ಜೆನ್ನಿಂಗ್ಸ್ 36 ರನ್ ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಭೋಜನ ವಿರಾಮದ ಬಳಿಕ ಜಾನಿ ಬೈರ್‌ಸ್ಟೋ ಶೂನ್ಯ ಸುತ್ತಿದರು. ಆದರೆ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾದರು. ರೂಟ್ 48 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಬಟ್ಲರ್ ಹಾಗೂ ಸ್ಟೋಕ್ಸ್ ಜೊತೆಯಾಟದಿಂದ ಇಂಗ್ಲೆಂಡ್ ಬೃಹತ್ ಮೊತ್ತದ ಸೂಚನೆ ನೀಡಿದೆ. ಸದ್ಯ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿದೆ. 

ಇಂಗ್ಲೆಂಡ್ ತಂಡವನ್ನ ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಆಲೌಟ್ ಮಾಡಿ ಭಾರತ 273 ರನ್ ಸಿಡಿಸಿತ್ತು. ಈ ಮೂಲಕ 27 ರನ್ ಮುನ್ನಡೆ ಪಡೆದುಕೊಂಡಿತ್ತು.