ಲಾರ್ಡ್ಸ್ ಮೈದಾನದಲ್ಲಿ ಕುಲದೀಪ್ ಮೋಡಿ-ಆಂಗ್ಲರ 2ನೇ ವಿಕೆಟ್ ಪತನ

India vs england 2nd odi kuldeep yadav strikes again
Highlights

ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದ ಇಂಗ್ಲೆಂಡ್ ತಂಡಕ್ಕೆ ಕುಲದೀಪ್ ಯಾದವ್ ಬ್ರೇಕ್ ಹಾಕಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಕುಲದೀಪ್ ಸ್ಪಿನ್ ಮೋಡಿ ಹೇಗಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ಲಂಡನ್(ಜು.14): ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಸ್ಪಿನ್ ಮೋಡಿ ಮುಂದುವರಿದಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಕುಲದೀಪ್ ಯಾದವ್ ಆಂಗ್ಲರ ಭರ್ಜರಿ ಜೊತೆಯಾಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡ ಜೇಸನ್ ರಾಯ್ ಹಾಗೂ ಜಾನಿ ಬೈರಿಸ್ಟೋ ಉತ್ತಮ ಆರಂಭ ನೀಡಿದ್ದರು. ಅರ್ಧಶತಕದ ಜೊತೆಯಾಟ ನೀಡಿದ ಈ ಜೋಡಿ ಭಾರತಕ್ಕೆ ಅಪಾಯದ ಸೂಚನೆ ನೀಡಿತ್ತು. ಆದರೆ ಜಾನಿ ಬೈರಿಸ್ಟೋ 38 ರನ್ ಸಿಡಿಸಿ, ಕುಲದೀಪ್ ಮೋಡಿಗೆ ಬಲಿಯಾದರು.

ಬೈರಿಸ್ಟೋ ಬೆನ್ನಲ್ಲೇ, ಜೇಸನ್ ರಾಯ್ 40 ರನ್‌ಗಳಿಸಿ, ಕುಲದೀಪ್‌ಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ 86 ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ. ಲಾರ್ಡ್ಸ್ ಮೈದಾನದಲ್ಲಿ ಕುಲದೀಪ್ ಸ್ಪಿನ್ ದಾಳಿ ಮೂಲಕ ಭಾರತಕ್ಕೆ ಯಸಸ್ಸು ತಂದುಕೊಟ್ಟಿರೋದು ಆತ್ಮವಿಶ್ವಾಸ ಹೆಚ್ಚಿಸಿದೆ.

 

loader