ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ-ಇಂದೇ ಸರಣಿ ಗೆಲ್ಲುತ್ತಾ ಟೀಂ ಇಂಡಿಯಾ?

India vs england, 2nd odi at Lords england elect to bat first both teams unchanged
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದ ಟಾಸ್ ಪ್ರಕ್ರೀಯೆ ಮುಗಿದಿದೆ. ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಗಾದರೆ ಉಭಯ ತಂಡಗಳು ಹೇಗಿದೆ? ಇಂದಿನ ಪಂದ್ಯ ಹೇಗರಲಿದೆ? ಇಲ್ಲಿದೆ.

ಲಂಡನ್(ಜು.14): ಭಾರತ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಭಾರತ ಹಾಗೂ ಇಂಗ್ಲೆಂಡ್ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ತಂಡವನ್ನ ಕಣಕ್ಕಿಳಿಸಿದೆ.
 

ಟಿ20 ಸರಣಿ ಸೋತಿರುವ ಇಂಗ್ಲೆಂಡ್ ತಂಡಕ್ಕೆ ಇಂದು ಅಗ್ನಿಪರೀಕ್ಷೆ. ಏಕದಿನ ಸರಣಿ ಉಳಿಸಿಕೊಳ್ಳಲು ಇಂಗ್ಲೆಂಡ್ ಕಠಿಣ ಹೋರಾಟ ನಡೆಸಲಿದೆ. ಲಾರ್ಡ್ಸ್ ಐತಿಹಾಸಿಕ ಮೈದಾನದಲ್ಲಿ ಇತಿಹಾಸರ ರಚಿಸಲು ಉಭಯ ತಂಡಗಳು ಸಜ್ಜಾಗಿದೆ. ಯಾರು ಗೆಲುವು ಸಾಧಿಸುತ್ತಾರೆ ಅನ್ನೋ ಕುತೂಹಲ ಈಗ ಅಭಿಮಾನಿಗಳಲ್ಲಿ ಮನೆಮಾಡಿದೆ.

loader