ದುಬೈ(ಸೆ.28): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಫೈನಲ್ ಹೋರಾಟ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ 48.3 ಓವರ್‌ಗಳಲ್ಲಿ 222ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಭಾರತದ ಗೆಲುವಿಗೆ 223 ರನ್ ಟಾರ್ಗೆಟ್ ನೀಡಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶಕ್ಕೆ ಲಿಟ್ಟನ್ ದಾಸ್ ಹಾಗೂ ಮೆಹದಿ ಹಸನ್ ಉತ್ತಮ ಆರಂಭ ನೀಡಿದರು. ಮೆಹದಿ 32 ರನ್ ಸಿಡಿಸಿ ಔಟಾದರು. ಆದರೆ ಲಿಟ್ಟನ್ ದಾಸ್ ಭರ್ಜರಿ ಶತಕ ಸಿಡಿಸಿದರು.

ಲಿಟ್ಟನ್ ದಾಸ್ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದರೆ, ಇಮ್ರುಲ್ ಕೈಸ್, ಮುಶ್ಪಿಕರ್ ರಹೀನ್, ಮೊಹಮ್ಮದ್ ಮಿಥುನ್ ಹಾಗೂ ಮೊಹಮ್ಮದುಲ್ಲಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ.

ಲಿಟ್ಟನ್ ದಾಸ್ 121 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಸೌಮ್ಯ ಸರ್ಕಾರ್ 33 ರನ್ ಕಾಣಿಕೆ ನೀಡಿದರು. ಸೌಮ್ಯ ಸರ್ಕಾರ್ ವಿಕೆಟ್ ಪತನದೊಂದಿಗೆ ಬಾಂಗ್ಲಾದೇಶ 48.3 ಓವರ್‌ಗಳಲ್ಲಿ 222ರನ್‌ಗೆ ಆಲೌಟ್ ಆಯಿತು.  ಭಾರತದ ಪರ ಕುಲ್ದೀಪ್ ಯಾದವ್ 3, ಕೇದಾರ್ ಜಾಧವ್ 2 ಹಾಗೂ ಯುಜುವೇಂದ್ರ ಚೆಹಾಲ್ ಹಾಗೂ ಜಸ್‌ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.