Asianet Suvarna News Asianet Suvarna News

ಟೀಂ ಇಂಡಿಯಾ ಮಾತ್ರ ಕಳಪೆ ಪ್ರವಾಸಿ ತಂಡವಲ್ಲ-ಟೀಕಿಸುವ ಮುನ್ನ ಯೋಚಿಸಿ'!

ವಿದೇಶಿ ಪ್ರವಾಸಗಳಲ್ಲಿ ಇತ್ತೀಚೆಗೆ ಯಾವ ತಂಡ ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ಭಾರತ ತಂಡವನ್ನ ಮಾತ್ರ ಯಾಕೆ ಟೀಕಿಸುತ್ತೀರಿ. ಇದು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಪ್ರಶ್ನೆ. ಶಾಸ್ತ್ರಿ ಸಿಡಿಮಿಡಿಗೊಂಡಿದ್ದೇಕೆ? ಇಲ್ಲಿದೆ ಹೆಚ್ಚಿನ ವಿವರ.

India vs Austrlai cricket No team travels well nowadays says Ravi Shastri
Author
Bengaluru, First Published Nov 19, 2018, 10:10 AM IST

ಬ್ರಿಸ್ಬೇನ್(ನ.19): ‘ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸ ಕೈಗೊಂಡಿರುವ ವಿಶ್ವದ ಯಾವುದೇ ತಂಡ ಉತ್ತಮ ಪ್ರದರ್ಶನ ತೋರಿಲ್ಲ. ಹೀಗಿರುವಾಗ ಕೇವಲ
ಭಾರತ ತಂಡವನ್ನು ಮಾತ್ರ ‘ಕಳಪೆ ಪ್ರವಾಸಿಗರು’ ದೂಷಿಸುವುದು ಸರಿಯಲ್ಲ’ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ, ತಂಡವನ್ನು ಸಮರ್ಥಿಸಿ
ಕೊಂಡಿದ್ದಾರೆ.

ಇತ್ತೀಚಿನ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ರವಾಸದ ಸೋಲಿನ ಬಗ್ಗೆ ನೀವು ಅಥವಾ ನಾಯಕ ಕೊಹ್ಲಿ, ತಂಡದ ಸದಸ್ಯರ ಜೊತೆ ಸೋಲಿನ ಕಾರಣಗಳ ಕುರಿತು ಸಮಾಲೋಚನೆ ನಡೆಸಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸ್ತ್ರಿ, ‘ಆಸ್ಟ್ರೇಲಿಯಾ ತಂಡ 90 ರ ದಶಕ ಮತ್ತು ನಂತರದಲ್ಲಿ ವಿದೇಶ ಪ್ರವಾಸ
ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತ್ತು.

ಬಳಿಕ ದಕ್ಷಿಣ ಆಫ್ರಿಕಾ ಕೂಡ ಕೆಲ ವರ್ಷಗಳವರೆಗೆ ಉತ್ತಮ ದಾಖಲೆ ಮಾಡಿತ್ತು. ಈ ಎರಡೂ ತಂಡಗಳನ್ನು ಬಿಟ್ಟರೆ ಸದ್ಯ ಕಳೆದ 5-6 ವರ್ಷಗಳಲ್ಲಿ ಯಾವ ತಂಡ ವಿದೇಶ ಪ್ರವಾಸದಲ್ಲಿ ಉತ್ತಮ ಸಾಧನೆ ಮಾಡಿದೆ ಹೇಳಿ? ಹೀಗಿರುವಾಗ ಕೇವಲ ಭಾರತ ತಂಡವನ್ನೇಕೆ ಟೀಕಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಭಾರತ ಪ್ರಸಕ್ತ ಋತುವಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1-2 ಮತ್ತು ಇಂಗ್ಲೆಂಡ್ ವಿರುದ್ಧ 1-4 ಪಂದ್ಯಗಳ ಅಂತರದಿಂದ ಸರಣಿ ಸೋಲನುಭವಿಸಿತ್ತು. ಅದರ ಬೆನ್ನಲ್ಲೇ ಇದೀಗ ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸ
ಕೈಗೊಂಡಿದೆ. ಅಲ್ಲಿ ತಂಡ 3 ಟಿ20, 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಭಾರತ, ನ.21ರಂದು ಗಾಬಾದಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿದೆ.

Follow Us:
Download App:
  • android
  • ios