ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಮಳೆ ವಿಲನ್ ಆಗಿದೆ. ಟಿ20 ಸರಣಿಯಲ್ಲಿ ಮಳೆಯಿಂದ ಹಿನ್ನಡೆ ಅನುಭವಿಸಿದ ಕೊಹ್ಲಿ ಸೈನ್ಯಕ್ಕೆ ಇದೀಗ ಅಭ್ಯಾಸ ಪಂದ್ಯದಲ್ಲೂ ಶಾಕ್ ನೀಡಿದೆ.
ಸಿಡ್ನಿ(ನ.28): ಭಾರತ ಹಾಗೂ ಆಸ್ಟ್ರೇಲಿಯಾ XI ನಡುವಿನ ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಹೀಗಾಗಿ ಟಾಸ್ ಪ್ರಕ್ರಿಯೆ ಕೂಡ ನಡೆಯದೆ ಮೊದಲ ದಿನದಾಟ ರದ್ದಾಗಿದೆ. ಈ ಮೂಲಕ 4 ದಿನದಟ ಅಭ್ಯಾಸ ಪಂದ್ಯ ಇದೀಗ 3 ದಿನಕ್ಕೆ ಇಳಿಕೆಯಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಮೊದಲ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದರೆ, ದ್ವಿತೀಯ ಪಂದ್ಯ ರದ್ದಾಗಿತ್ತು. ಇನ್ನು ಅಂತಿಮ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಂಡಿತ್ತು.
ಮೂರು ದಿನ ಆಯೋಜಿಸಲಾಗಿದ್ದ ಅಭ್ಯಾಸ ಪಂದ್ಯವನ್ನ ಬಿಸಿಸಿಐ ಮನವಿ ಮೇರೆಗೆ 4 ದಿನಕ್ಕೆ ವಿಸ್ತರಿಸಲಾಗಿತ್ತು. ಆದರೆ ಇದೀಗ ಮಳೆಯಿಂದಾಗಿ ಮೊದಲ ದಿನದಾಟ ರದ್ದಾಗಿದೆ. ಹೀಗಾಗಿ ನಾಳೆಯಿಂದ(ನ.29) ಪಂದ್ಯ ಮುಂದುವರಿಯುವ ಸಾಧ್ಯತೆ ಇದೆ.
