ಮಳೆಯಿಂದಾಗಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯದ ಮೊದಲ ದಿನ ರದ್ದಾಗಿದೆ. ಹೀಗಾಗಿ ಸಿಕ್ಕ ಸಮಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಮಾಡಿದ್ದೇನು? ಇಲ್ಲಿದೆ ವಿವರ.

ಸಿಡ್ನಿ(ನ.28): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯಕ್ಕೂ ಮಳೆರಾಯ ಎಂಟ್ರಿಕೊಟ್ಟಿದ್ದಾನೆ. ಟಿ20 ಸರಣಿಯಲ್ಲಿ ಕಾಟ ಕೊಟ್ಟಿದ್ದ ವರುಣ ಇದೀಗ ಅಭ್ಯಾಸ ಪಂದ್ಯದದ ಮೊದಲ ದಿನದಾಟವನ್ನೇ ರದ್ದುಗೊಳಿಸಿದೆ. ಹೀಗಾಗಿ ಸಿಕ್ಕ ಸಮಯವನ್ನ ಟೀಂ ಇಂಡಿಯಾ ಕ್ರಿಕೆಟಿಗರು ಉಪಯುಕ್ತವಾಗಿ ಬಳಸಿಕೊಂಡಿದ್ದಾರೆ.

ಸಿಡ್ನಿಯಲ್ಲಿ ಆಯೋಜಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ XI ನಡುವಿನ ಅಭ್ಯಾಸ ಪಂದ್ಯದ ಮೊದಲ ದಿನ ಟಾಸ್ ಪ್ರಕ್ರಿಯೆ ನಡೆಯದೇ ದಿನದಾಟ ರದ್ದಾಗಿದೆ. ಹೀಗಾಗಿ ಸಿಕ್ಕ ಫ್ರೀ ಟೈಂ ಬಳಸಿಕೊಂಡ ವಿರಾಟ್ ಕೊಹ್ಲಿ ಸೈನ್ಯ ಜಿಮ್‌ನಲ್ಲಿ ವರ್ಕೌಟ್ ಮಾಡಿದೆ.

Scroll to load tweet…

ಟ್ರೈನರ್ ಶಂಕರ್ ಬಸು ಜೊತೆ ನಾಯಕ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಮುರಳಿ ವಿಜಯ್ ಸೆಲ್ಫಿ ಕ್ಲಿಕ್ಕಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮಳೆ ನಿಲ್ಲೋ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದೇವೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.