ಆಸ್ಟ್ರೇಲಿಯಾ ವಿರುದ್ಧ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ಮುಂದುವರಿದಿದೆ. ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ರನ್ ಸಿಡಿಸಿ ಔಟಾದ ರಾಹುಲ್ ವಿರುದ್ದ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪರ್ತ್(ಡಿ.15): ಆಸ್ಟ್ರೇಲಿಯಾ ವಿರುದ್ದ ಪರ್ತ್ ಟೆಸ್ಟ್ ಪಂದ್ಯದ ಗೆಲುವಿಗೆ ತೀವ್ರ ಪೈಪೋಟಿ ಆರಂಭವಾಗಿದೆ. ಆಸಿಸ್ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ದಿಟ್ಟ ಹೋರಾಟ ನೀಡಬೇಕಿದ್ದ ಟೀಂ ಇಂಡಿಯಾಗೆ ಉತ್ತಮ ಆರಂಭಸಿಗಲಿಲ್ಲ. ಅದರಲ್ಲೂ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಕಳಪೆ ಪ್ರದರ್ಶ ನೀಡೋ ಮೂಲಕ ನಿರಾಸೆ ಅನುಭವಿಸಿದ್ದಾರೆ.
ರಾಹುಲ್ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವುದು ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ. ಇದೀಗ ಪರ್ತ್ ಪಂದ್ಯದಲ್ಲಿ ಬಹುಬೇಗನೆ ಔಟಾಗಿರೋದು ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾಗಿದೆ.
;
