ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾಗೆ ಪ್ರಶಂಸೆ ವ್ಯಕ್ತವಾಗಿದೆ. ಐತಿಹಾಸಿಕ ಗೆಲುವಿನ ಶ್ರೇಯಸ್ಸು ಯಾರಿಗೆ ಸಲ್ಲಬೇಕು? ಇದಕ್ಕೆ ಕೊಹ್ಲಿ ಉತ್ತರವೇನು? ಇಲ್ಲಿದೆ ವಿವರ.
ಆಡಿಲೇಡ್(ಡಿ.10): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಮೊದಲ ಟೆಸ್ಟ್ ಗೆಲುವಿಗೆ ಕಾರಣರಾದ ಪ್ರಮುಖ ಆಟಗಾರರಿಗೆ ನಾಯಕ ವಿರಾಟ್ ಕೊಹ್ಲಿ ಗೆಲುವಿನ ಶ್ರೇಯಸ್ಸನ್ನ ಅರ್ಪಿಸಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಸೆಂಚುರಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ ಚೇತೇಶ್ವರ್ ಪೂಜಾರಾ, ಅತ್ಯುತ್ತಮ ಸಾಥ್ ನೀಡಿದ ಅಜಿಂಕ್ಯ ರಹಾನೆ ಹಾಗೂ ನಾಲ್ವರು ಬೌಲರ್‌ಗಳಿಗೆ ಈ ಗೆಲುವು ಸಲ್ಲಬೇಕು ಎಂದು ಕೊಹ್ಲಿ ಹೇಳಿದ್ದಾರೆ.
ಒತ್ತಡವಿತ್ತು, ಆದರೆ ಅದನ್ನ ತೋರ್ಪಡಿಸುವಂತಿರಲಿಲ್ಲ. ಆದರೆ ಬೌಲರ್‌ಗಳು ಅತ್ಯುತ್ತಮವಾಗಿ ಸ್ಪಂದಿಸಿದರು. ಹೀಗಾಗಿ ಟೆಸ್ಟ್ ಗೆಲುವು ಸಾಧ್ಯವಾಯಿತು. ಸದ್ಯ ಸರಣಿಯಲ್ಲಿ ನಾವು 1-0 ಮುನ್ನಡೆ ಸಾಧಿಸಿದ್ದೇವೆ. ಇದೇ ಪ್ರದರ್ಶನ ಮುಂದುವರಿಸೋ ಭರವಸೆ ಇದೆ.
