ಅಡಿಲೇಡ್[ಡಿ.09]: ಟೀಂ ಇಂಡಿಯಾ ಬ್ಯಾಟ್ಸ್‌ಮನ್ಸ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಅಡಿಲೇಡ್ ಟೆಸ್ಟ್‌ನಲ್ಲಿ ಬಗಿಹಿಡಿತ ಸಾಧಿಸಿದ್ದು, ನಾಲ್ಕನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 104 ರನ್ ಬಾರಿಸಿದೆ. ಕೊನೆಯ ದಿನ ಭಾರತ ಗೆಲ್ಲಲು ಇನ್ನು 6 ವಿಕೆಟ್ ಕಬಳಿಸಬೇಕಿದೆ.

 

 

ಆಸಿಸ್‌ಗೆ 323 ರನ್‌ಗಳ ಕಠಿಣ ಗುರಿ ನೀಡಿರುವ ಭಾರತ ಬೌಲಿಂಗ್‌ನಲ್ಲು ಅದ್ಭುತ ಪ್ರದರ್ಶನ ತೋರಿತು. ಆರಂಭದಲ್ಲೇ ಫಿಂಚ್ ವಿಕೆಟ್ ಕಬಳಿಸಿದ ಅಶ್ವಿನ್ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಹ್ಯಾರಿಸ್ ವಿಕೆಟ್ ಕಬಳಿಸಿದ ಶಮಿ, ಆಸಿಸ್‌ಗೆ ಮತ್ತೊಂದು ಶಾಕ್ ನೀಡಿದರು.

ಉಸ್ಮಾನ್ ಖವಾಜ ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು.  60 ರನ್‍‌ಗಳಿಗೆ 3 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿತು. ಒಂದೆಡೆ ಶಾನ್ ಮಾರ್ಶ್ ತಂಡಕ್ಕೆ ಆಸರೆಯಾದರು. ಆದರೆ ಮತ್ತೊಂದೆಡೆ ವಿಕೆಟ್ ಪತನ ನಿಲ್ಲಲಿಲ್ಲ. ಪೀಟರ್‌ಹ್ಯಾಂಡ್ಸ್‌ಕಾಂಬ್ 14 ರನ್ ಸಿಡಿಸಿ ಔಟಾದರು. 

ಟ್ರಾವಿಸ್ ಹೆಡ್ 11 ರನ್ ಸಿಡಿಸಿ ನಿರ್ಗಮಿಸಿದರು. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 104 ರನ್ ಸಿಡಿಸಿದೆ. ಆಸಿಸ್ ಗೆಲುವಿಗೆ ಅಂತಿಮ 219 ರನ್ ಗಳಿಸಬೇಕಿದೆ. ಇತ್ತ ಭಾರತ  6 ವಿಕೆಟ್ ಕಬಳಿಸಿ ಗೆಲುವಿನ ಆರಂಭ ಪಡೆಯಲು ತುದಿಗಾಲಲ್ಲಿ ನಿಂತಿದೆ.