‘ಕೇವಲ ಸಾಂಪ್ರದಾಯಿಕ ಹಗಲು ಟೆಸ್ಟ್ ಪಂದ್ಯಗಳು ಮಾತ್ರ ಐಸಿಸಿ ಟೆಸ್ಟ್ ಚಾಂಪಿಯನ್‌'ಶಿಪ್‌'ನ ಮಾನ್ಯತೆ ಹೊಂದಿವೆ. ಹಗಲು-ರಾತ್ರಿ ಪಂದ್ಯಗಳು ಟೆಸ್ಟ್ ಚಾಂಪಿಯನ್‌'ಶಿಪ್‌'ಗೆ ಒಳಪಡದೆ ಇದ್ದಲ್ಲಿ, ಆಡಿ ಏನು ಪ್ರಯೋಜನ’ ಎಂದು ಬಿಸಿಸಿಐ ಹಿರಿಯ ಅಧಿಕಾರಿ ಪ್ರಶ್ನಿಸಿದ್ದಾರೆ. ಇದರೊಂದಿಗೆ ಬಿಸಿಸಿಐ ಒಳಗೆ ಎಲ್ಲವೂ ಸರಿಯಿಲ್ಲ ಎಂದು ಮತ್ತೆ ಸಾಬೀತಾಗಿದೆ.

ಕೋಲ್ಕತಾ(ಏ.25): ಭಾರತ ತಂಡ ಸದ್ಯಕ್ಕೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಸೋಮವಾರವಷ್ಟೇ ವೆಸ್ಟ್‌ಇಂಡೀಸ್ ವಿರುದ್ಧ ಈ ವರ್ಷ ಭಾರತ ತನ್ನ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಆಡಲಿದೆ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದರು. ಮಂಗಳವಾರ ಇಲ್ಲಿ ಮಾತನಾಡಿದ ಬಿಸಿಸಿಐ ಹಿರಿಯ ಅಧಿಕಾರಿ, ‘ಮುಂಬರುವ ಅವಧಿಯಲ್ಲಿ ಭಾರತ ತಂಡ 309 ದಿನಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದೆ. ಕಳೆದ ಅವಧಿಗಿಂತ 92 ದಿನಗಳನ್ನು ಕಡಿತಗೊಳಿಸಲಾಗಿದೆ. ಆದರೆ ತವರಿನಲ್ಲಿ 15ರ ಬದಲು 19 ಟೆಸ್ಟ್‌'ಗಳನ್ನು ಆಡಲಿದ್ದು, ಪ್ರತಿ ಪಂದ್ಯವೂ ಐಸಿಸಿ ಟೆಸ್ಟ್ ಚಾಂಪಿಯನ್‌'ಶಿಪ್‌'ನ ಭಾಗವಾಗಿರಲಿದೆ. ಆದರೆ ಯಾವ ಪಂದ್ಯವೂ ಹಗಲು-ರಾತ್ರಿ ಪಂದ್ಯವಾಗಿರುವುದಿಲ್ಲ’ ಎಂದಿದ್ದಾರೆ.