ಕಾನ್ಪುರದಲ್ಲಿ 500ನೇ ಪಂದ್ಯವಾಡಿದ ಭಾರತ ತಂಡ ಕೋಲ್ಕತ್ತಾದಲ್ಲಿ 250ನೇ ಪಂದ್ಯವನ್ನಾಡುತ್ತಿರುವುದು ವಿಶೇಷ.
ಕೋಲ್ಕತ್ತಾ(ಸೆ.29): ಭಾರತ-ನ್ಯೂಜಿಲೆಂಡ್ ನಡುವೆ ನಾಳೆಯಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಟೆಸ್ಟ್ ಗೆದ್ದು ಬೀಗುತ್ತಿರುವ ಭಾರತ ತಂಡ ನಂಬರ್ ಒನ್ ಸ್ಥಾನಕ್ಕೇರಲು 2ನೇ ಟೆಸ್ಟ್ ಸಹ ಗೆಲ್ಲುವ ತವಕದಲ್ಲಿದೆ.
ಕಾನ್ಪುರದಲ್ಲಿ 500ನೇ ಪಂದ್ಯವಾಡಿದ ಭಾರತ ತಂಡ ಕೋಲ್ಕತ್ತಾದಲ್ಲಿ 250ನೇ ಪಂದ್ಯವನ್ನಾಡುತ್ತಿರುವುದು ವಿಶೇಷ. ಗಾಯಾಳು ಕೆ.ಎಲ್. ರಾಹುಲ್ ಬದಲಿಗೆ ಗೌತಮ್ ಗಂಬೀರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಇಶಾಂತ್ ಶರ್ಮಾ ಸಹ ಚಿಕುನ್ ಗುನ್ಯಾದಿಂದ ಬಳಲುತ್ತಿದ್ದು, ಆಫ್ ಸ್ಪಿನ್ನರ್ ಜಯಂತ್ ಯಾದವ್`ಗೆ ಬುಲಾವ್ ನೀಡಲಾಗಿದೆ.
ಇನ್ನುಳಿದಂತೆ, ಭಾರತದಲ್ಲಿ ನಾವೇ ಕೀಮಗ್ ಎನ್ನುವುದನ್ನ ಸ್ಪಿನ್ನರ್ಸ್ ಸಾಬೀತುಪಡಿಸಿದ್ದು, 2ನೇ ಟೆಸ್ಟ್`ನಲ್ಲಿ ಮುಂದುವರೆಯಲಿದೆ.
