2006ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ವಿಶ್ವ ಮಹಿಳಾ ಬಾಕ್ಸಿಂಗ್ ಟೂರ್ನಿ ನಡೆದಿತ್ತು.
ನವದೆಹಲಿ(ಜು.25): ಇದೇ ಮೊದಲ ಬಾರಿಗೆ ಭಾರತ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್'ಶಿಪ್'ಗೆ ಆತಿಥ್ಯ ವಹಿಸುತ್ತಿದ್ದು, 2021ರ ಪಂದ್ಯಾವಳಿ ಭಾರತದಲ್ಲಿ ನಡೆಯಲಿದೆ.
2018ರ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್'ಶಿಪ್ ಕೂಡ ಭಾರತದಲ್ಲೇ ಆಯೋಜನೆಗೊಳ್ಳಲಿದೆ. ರಷ್ಯಾದ ಮಾಸ್ಕೊದಲ್ಲಿ ನಡೆದ ಸಭೆಯ ಬಳಿಕ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಈ ವಿಷಯವನ್ನು ಪ್ರಕಟಿಸಿದೆ.
‘2019ರ ಚಾಂಪಿಯನ್'ಶಿಪ್'ಗೆ ರಷ್ಯಾದ ಸೋಚಿ ನಗರ ಆತಿಥ್ಯ ವಹಿಸಿದರೆ, 2021ರ ಚಾಂಪಿಯನ್'ಶಿಪ್ ನವದೆಹಲಿಯಲ್ಲಿ ನಡೆಯಲಿದೆ. ಇನ್ನು 2019ರ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್'ಶಿಪ್'ಗೆ ಟರ್ಕಿ ದೇಶದ ಟ್ರಾಬ್ಜಾನ್ ಆತಿಥ್ಯ ವಹಿಸಲಿದೆ’ ಎಂದು ಅಸೋಸಿಯೇಷನ್'ನ ಅಧ್ಯಕ್ಷ ಡಾ. ಚಿಂಗ್ ಕುವೊ ವೂ ತಿಳಿಸಿದರು.
ಈ ವಿಷಯ ಹೊರ ಬೀಳುತ್ತಿದ್ದಂತೆಯೇ ಕ್ರೀಡಾ ಸಚಿವ ವಿಜಯ್ ಗೋಯೆಲ್ ಅಂತರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ, ಜೊತೆಗೆ ಬಾಕ್ಸಿಂಗ್ ಅಭಿಮಾನಿಗಳಿಗೆ ಹಾಗೂ ಆಟಗಾರರಿಗೆ ಶುಭ ಸುದ್ದಿ ಎಂದು ಟ್ವೀಟ್ ಮಾಡಿದ್ದಾರೆ.
2006ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ವಿಶ್ವ ಮಹಿಳಾ ಬಾಕ್ಸಿಂಗ್ ಟೂರ್ನಿ ನಡೆದಿತ್ತು.
