ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡ ವನಿತೆಯರ ಪಡೆ ಸಿಂಗಾಪುರದ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಇದರ ಜೊತೆಗೆ ಬಲಿಷ್ಟ ಎದುರಾಳಿ ತಂಡಕ್ಕೆ ಒಂದು ಗೋಲು ದಾಖಲಿಸಲೂ ಅವಕಾಶ ಮಾಡಿಕೊಡಲಿಲ್ಲ.

ಕಕಮಿಗಹರ(ಅ.28): ಸಿಂಗಾಪುರ ತಂಡವನ್ನು 10-0 ಅಂತರದಲ್ಲಿ ಮಣಿಸುವ ಮೂಲಕ ಮಹಿಳಾ ಏಷ್ಯಾ ಕಪ್ ಹಾಕಿಯಲ್ಲಿ ಭಾರತೀಯ ವನಿತೆಯರ ಪಡೆ ಭರ್ಜರಿ ಶುಭಾರಂಭ ಮಾಡಿದೆ.

ಭಾರತದ ಪರ ಆಕ್ರಮಣಕಾರಿ ಆಟ ಪ್ರದರ್ಶಿಸಿದ ನವ್'ನೀತ್ ಕೌರ್(3&41 ನಿ), ರಾಣಿ(15&18 ನಿ) ಮತ್ತು ನವಜೋತ್ ಕೌರ್(30&50 ನಿ) ತಲಾ ಎರಡು ಗೋಲು ಬಾರಿಸಿದರೆ, ಲಾಲ್ ರೆಶಿಮಿ(18 ನಿ), ದೀಪ್ ಗ್ರೇಸ್ ಎಕ್ಕಾ(25 ನಿ), ಗುರ್ಜೀತ್ ಕೌರ್(41 ನಿ) ಮತ್ತು ಸೋನಿಕಾ(45 ನಿ) ತಲಾ ಒಂದೊಂದು ಗೋಲು ದಾಖಲಿಸುವ ಮೂಲಕ ಭಾರತ ಎ ಗುಂಪಿನಲ್ಲಿ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಜಯ ದಾಖಲಿಸಿತು.

ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡ ವನಿತೆಯರ ಪಡೆ ಸಿಂಗಾಪುರದ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಇದರ ಜೊತೆಗೆ ಬಲಿಷ್ಟ ಎದುರಾಳಿ ತಂಡಕ್ಕೆ ಒಂದು ಗೋಲು ದಾಖಲಿಸಲೂ ಅವಕಾಶ ಮಾಡಿಕೊಡಲಿಲ್ಲ.