ಕ್ರೀಡಾ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಗಿದ್ದು, ಎಲ್ಲಾ ಕ್ರೀಡೆಗಳಲ್ಲೂ ಆಟಗಾರು ತಮ್ಮ ಹೆಸರಿನೊಂದಿಗೆ ಮೈದಾನಕ್ಕೆ ಇಳಿಯುವುದು ಸಾಮಾನ್ಯ, ಆದರೆ ಟೀಮ್ ಇಂಡಿಯಾ ಆಟಗಾರರು ತಾಯಿಯ ಮಹತ್ವ ಸಾರುವ ಸಲುವಾಗಿ ತಮ್ಮ ಬೆನ್ನಹಿಂದೆ ತಾಯಿಯ ಹೆಸರನ್ನು ಹಾಕಿಕೊಂಡಿದ್ದಾರೆ
ವೈಜಾಜ್(ಅ.29): ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದಿದ ತಾಯಿಯ ಮಹತ್ವದ ಬಗ್ಗೆ ಹೇಳುವ ಈ ಜಾಹೀರಾತು ಈಗ ಮೈದಾನದಲ್ಲಿ ಕಾಣಿಸಿಕೊಂಡಿದೆ. ಅಮ್ಮಂದಿರಿಗೆ ಗೌರವ ಸಲ್ಲಿಸುವ ಸಲುವಾಗಿ ಟೀಮ್ ಇಂಡಿಯಾ ಆಟಗಾರರು ಅಮ್ಮಂದಿರ ಹೆಸರಿನ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದಿದ್ದಾರೆ.
ಭಾರತ-ನ್ಯೂಜಿಲೆಂಡ್ 5ನೇ ಏಕದಿನ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಭಾರತೀಯ ಆಟಗಾರರ ಈ ಜೆರ್ಸಿ. ಹೌದು, ಇಷ್ಟು ದಿನ ಆಟಗಾರರ ಜೆರ್ಸಿಯಲ್ಲಿ ಅವರವರ ಹೆಸರು ಇರುತ್ತಿದ್ದವು. ಆದರೆ ಈ ಪಂದ್ಯದಲ್ಲಿ ಮಾತ್ರ ಆಟಗಾರರು ತಮ್ಮ ತಾಯಿಯ ಹೆಸರನ್ನ ಹಾಕಿಸಿಕೊಂಡಿದ್ದಾರೆ.
ಖಾಸಗಿ ವಾಹಿನಿಯೊಂದರ ಜಾಹೀರಾತು ಸಲುವಾಗಿ ಟೀಮ್ ಇಂಡಿಯಾದ ಆಟಗಾರರಿರುವ ಜಾಹೀರಾತು ನಿರ್ಮಿಸಿತ್ತು, ಆಟಗಾರರು ತಮ್ಮ ಜರ್ಸಿ ಹಿಂದೆ ಅವರವರ ಅಮ್ಮಂದಿರ ಹೆಸರಿನೊಂದಿಗೆ ಕಾಣಿಸಿಕೊಂಡು, ಜೀವನದಲ್ಲಿ ತಾಯಿಯ ಮಹತ್ವವನ್ನು ಸಾರಿದ್ದರು. ಈಗ ಮೈದಾನದಲ್ಲೂ ಅಮ್ಮದಿಂರ ಹೆಸರಿನೊಂದಿಗೆ ಮಿಂಚುತ್ತಿದ್ದಾರೆ.
ಕ್ರೀಡಾ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು, ಎಲ್ಲಾ ಕ್ರೀಡೆಗಳಲ್ಲೂ ಆಟಗಾರು ತಮ್ಮ ಹೆಸರಿನೊಂದಿಗೆ ಮೈದಾನಕ್ಕೆ ಇಳಿಯುವುದು ಸಾಮಾನ್ಯ, ಆದರೆ ಟೀಮ್ ಇಂಡಿಯಾ ಆಟಗಾರರು ತಾಯಿಯ ಮಹತ್ವ ಸಾರುವ ಸಲುವಾಗಿ ತಮ್ಮ ಬೆನ್ನಹಿಂದೆ ತಾಯಿಯ ಹೆಸರನ್ನು ಹಾಕಿಕೊಂಡಿದ್ದಾರೆ. ಈ ಹೊಸ ಬದಲಾವಣೆಯ ಕುರಿತು ಮಾತನಾಡಿದ ನಾಯಕ ಧೋನಿ, ದೇಶ ಕಾಯುವ ಸೈನಿಕರಿಗೆ ಗೌರವ ನೀಡುವಷ್ಟೆ ಗೌರವವನ್ನು ತಾಯಿಗೂ ನೀಡಬೇಕು ಆಕೆಯಿಂದಲೇ ನಾವೇಲ್ಲರು ಎಂದಿದ್ದಾರೆ.
