ಇಂಡಿಯಾ ಓಪನ್: ಸಾತ್ವಿಕ್-ಚಿರಾಗ್ ರನ್ನರ್ ಅಪ್..!
ಭಾನುವಾರ ನಡೆದ ಫೈನಲ್‌ನಲ್ಲಿ ವಿಶ್ವ ನಂ.2 ಸಾತ್ವಿಕ್-ಚಿರಾಗ್ ಮೊದಲ ಗೇಮ್‌ನಲ್ಲಿ ಜಯಗಳಿಸಿದರು. ಆದರೆ 2ನೇ ಗೇಮ್‌ನಲ್ಲಿ ಕೊರಿಯಾ ಜೋಡಿಯ ಆಕ್ರಮಣಕಾರಿ ಆಟದ ಮುಂದೆ ಮಂಡಿಯೂರಿದ ಭಾರತೀಯ ಜೋಡಿ, ಪಂದ್ಯವನ್ನು 3ನೇ ಗೇಮ್‌ಗೆ ಕೊಂಡೊಯ್ಯಿತು. ನಿರ್ಣಾಯಕ ಗೇಮ್‌ನಲ್ಲಿ ಪ್ರಬಲ ಹೋರಾಟ ಕಂಡುಬಂದರೂ, ಕೊರಿಯಾ ಜೋಡಿ ಅಂತಿಮವಾಗಿ ಮೇಲುಗೈ ಸಾಧಿಸಿತು.
ನವದೆಹಲಿ(ಜ.22): ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ ಸೋಲನುಭವಿಸಿದೆ. ದಕ್ಷಿಣ ಕೊರಿಯಾದ ಕಾಂಗ್ ಮಿನ್ ಹ್ಯೂಕ್- ಸಾಂಗ್‌ಜಾ ವಿರುದ್ಧ 21-15, 11-21, 18-21ರಿಂದ ಸೋತು ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡರು.
ಭಾನುವಾರ ನಡೆದ ಫೈನಲ್‌ನಲ್ಲಿ ವಿಶ್ವ ನಂ.2 ಸಾತ್ವಿಕ್-ಚಿರಾಗ್ ಮೊದಲ ಗೇಮ್‌ನಲ್ಲಿ ಜಯಗಳಿಸಿದರು. ಆದರೆ 2ನೇ ಗೇಮ್‌ನಲ್ಲಿ ಕೊರಿಯಾ ಜೋಡಿಯ ಆಕ್ರಮಣಕಾರಿ ಆಟದ ಮುಂದೆ ಮಂಡಿಯೂರಿದ ಭಾರತೀಯ ಜೋಡಿ, ಪಂದ್ಯವನ್ನು 3ನೇ ಗೇಮ್‌ಗೆ ಕೊಂಡೊಯ್ಯಿತು. ನಿರ್ಣಾಯಕ ಗೇಮ್‌ನಲ್ಲಿ ಪ್ರಬಲ ಹೋರಾಟ ಕಂಡುಬಂದರೂ, ಕೊರಿಯಾ ಜೋಡಿ ಅಂತಿಮವಾಗಿ ಮೇಲುಗೈ ಸಾಧಿಸಿತು.
Australia Open 58ನೇ ಬಾರಿ ಗ್ರ್ಯಾನ್‌ಸ್ಲಾಂ ಕ್ವಾರ್ಟರ್‌ಗೆ ಜೋಕೋವಿಚ್ ಲಗ್ಗೆ..!
2ನೇ ಬಾರಿ ರನ್ನರ್ ಅಪ್
ಸಾತ್ವಿಕ್-ಚಿರಾಗ್ 2024ರಲ್ಲಿ 2ನೇ ಬಾರಿ ಬಿಡಬ್ಲ್ಯುಎಫ್ ಟೂರ್ನಿಯಲ್ಲಿ ರನ್ನರ್-ಅಪ್ ಆದರು. ಕಳೆದ ವಾರ ಮಲೇಷ್ಯಾ ಓಪನ್ ಫೈನಲ್‌ನಲ್ಲೂ ಸಾತ್ವಿಕ್-ಚಿರಾಗ್ ಜೋಡಿ ಸೋಲನುಭವಿಸಿತ್ತು
ಏಷ್ಯನ್ ಮ್ಯಾರಥಾನ್: ಚಿನ್ನ ಗೆದ್ದ ಮಾನ್ ಸಿಂಗ್
ಹಾಂಗ್‌ಕಾಂಗ್: ಇಲ್ಲಿ ನಡೆದ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಾನ್ ಸಿಂಗ್ ಚಿನ್ನ ಗೆದ್ದಿದ್ದು, ಕೂಟದಲ್ಲಿ ಚಿನ್ನ ಗೆದ್ದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾನ್ 2 ತಾಸು 14.19 ನಿಮಿಷಗಳಲ್ಲಿ ಗುರಿ ತಲುಪಿದರು. ಕರ್ನಾಟಕದ ಬೆಳ್ಳಿಯಪ್ಪ 2 ಗಂಟೆ 20:20 ನಿಮಿಷದಲ್ಲಿ ಕ್ರಮಿಸಿ 6ನೇ ಸ್ಥಾನಿಯಾದರು. ಮಾನ್‌ಗೂ ಮುನ್ನ ಗೋಪಿ ಥೋನಕಲ್ 2017ರ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದರು.
3ನೇ ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಯಾರೂ ಮಾಡದ ದಾಖಲೆ ಬರೆದ ಶೋಯೆಬ್ ಮಲಿಕ್..!
ಎಸ್‌ಎಫ್‌ಎ ಕೂಟ: ಇಂದು ಈಜು, ಟಿಟಿ, ಕಬಡ್ಡಿ ಫೈನಲ್
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಎಸ್‌ಎಫ್‌ಏ ಚಾಂಪಿಯನ್‌ಶಿಪ್‌ನ 6ನೇ ದಿನ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಕರಾಟೆ, ಟೇಬಲ್ ಟೆನಿಸ್, ಟೆನಿಸ್, ಈಜು ಮತ್ತು ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಶಾಲಾ ಮಕ್ಕಳು ಉತ್ಸಾಹದಿಂದ ಭಾಗಿಯಾದರು. 7ನೇ ದಿನವಾದ ಸೋಮವಾರ ಈಜು, ಟೇಬಲ್ ಟೆನಿಸ್ ಫೈನಲ್‌ಗಳ ಜೊತೆಗೆ ಕಬಡ್ಡಿ ಮತ್ತು ಥ್ರೋಬಾಲ್‌ನ ಸ್ಪರ್ಧೆಗೆ ಕ್ರೀಡಾಂಗಣ ಸಜ್ಜಾಗಿದೆ.
ಪ್ರೊ ಕಬಡ್ಡಿ ಲೀಗ್: ತಲೈವಾಸ್‌ಗೆ ಮಣಿದ ಬುಲ್ಸ್
ಹೈದರಾಬಾದ್: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ನ ನೀರಸ ಪ್ರದರ್ಶನ ಮುಂದುವರಿದಿದೆ. ಪ್ಲೇ-ಆಫ್ ದೃಷ್ಟಿಯಿಂದ ಗೆಲ್ಲಲಬೇಕಿದ್ದ ಭಾನುವಾರದ ತಮಿಳ್ ತಲೈವಾಸ್ ವಿರುದ್ಧದ ಪಂದ್ಯದಲ್ಲಿ ಬುಲ್ಸ್ 28-45 ಅಂಕಗಳಿಂದ ಸೋಲನುಭವಿಸಿತು. ತಂಡಕ್ಕಿದು ಟೂರ್ನಿಯಲ್ಲಿ 15 ಪಂದ್ಯಗಳಲ್ಲಿ 9ನೇ ಸೋಲು. ಅತ್ತ ತಲೈವಾಸ್ 14ರಲ್ಲಿ 5ನೇ ಜಯಗಳಿಸಿತು.
ಬುಲ್ಸ್‌ಗೆ ಈ ಪಂದ್ಯದಲ್ಲೂ ತಾರಾ ರೈಡರ್‌ಗಳು ಕೈಕೊಟ್ಟರು. ವಿಕಾಸ್ ಖಂಡೋಲಾ 7 ರೈಡ್ ಮಾಡಿದರೂ ಒಂದೂ ಅಂಕ ಗಳಿಸಲಿಲ್ಲ. ಕೊನೆಯಲ್ಲಿ ಅಂಕಣಕ್ಕೆ ಬಂದ ಭರತ್ 4 ರೈಡ್‌ನಲ್ಲಿ 3 ಅಂಕ ಗಳಿಸಿದರು. ಆದರೆ ಯುವ ರೈಡರ್ ಅಕ್ಷಿತ್ 12 ಅಂಕಗಳಿಸಿ ಗಮನಸೆಳೆದರು. ತಲೈವಾಸ್‌ನ ನರೇಂದರ್ 13, ಅಜಿಂಕ್ಯಾ ಪವಾರ್ 11 ರೈಡ್ ಅಂಕ ಗಳಿಸಿ ಗೆಲುವಿನ ರೂವಾರಿಗಳಾದರು.
ಭಾನುವಾರದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ವಿರುದ್ಧ ಪುಣೇರಿ ಪಲ್ಟನ್ 34-24 ಅಂಕಗಳಿಂದ ಗೆಲುವು ಸಾಧಿಸಿತು.
ಇಂದಿನ ಪಂದ್ಯಗಳು
ಬೆಂಗಾಲ್-ಜೈಪುರ, ರಾತ್ರಿ 8ಕ್ಕೆ
ಟೈಟಾನ್ಸ್-ಹರ್ಯಾಣ, ರಾತ್ರಿ 9ಕ್ಕೆ