ಕೋಲ್ಕತ್ತಾ(ಅ.03): ಟೀಮ್ ಇಂಡಿಯಾ ಮುಂದಿನ ವರ್ಷ ಇಂಗ್ಲೆಂಡ್​ನಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡುವುದು ಅನುಮಾನವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಧಾ ಸಮಿತಿ ಶಿಫಾರಸುಗಳನ್ನು ಅಳವಡಿಸಿಕೊಂಡರೆ ಭಾರತ, ಐಪಿಎಲ್ ಆಡಬೇಕು. ಇಲ್ಲ ಚಾಂಪಿಯನ್ಸ್ ಟ್ರೋಫಿ ಆಡಬೇಕಿದೆ. ಲೋಧಾ ಸಮಿತಿ ಪ್ರಕಾರ ಒಂದು ಟೂರ್ನಿಗೂ ಮತ್ತೊಂದು ಟೂರ್ನಿಗೂ 15 ದಿನಗಳ ಅಂತರ ಕಾಯ್ದಿರಿಕೊಳ್ಳಬೇಕು. 

ಐಪಿಎಲ್ ಮೇ ಕೊನೆಯಲ್ಲಿ ಅಂತ್ಯವಾಗಲಿದೆ. ಚಾಂಪಿಯನ್ಸ್ ಟ್ರೋಫಿ ಜೂನ್ 1ರಿಂದ ಆರಂಭವಾಗಲಿದೆ. ಹೀಗಾಗಿ ಭಾರತೀಯರು ಐಪಿಎಲ್ ಅಥವಾ ಚಾಂಪಿಯನ್ಸ್ ಟ್ರೋಫಿ ಒಂದನ್ನ ಮಿಸ್ ಮಾಡಿಕೊಳ್ಳಬೇಕು. ಇದನ್ನ ನೋಡಿದ್ರೆ ಭಾರತ ಚಾಂಪಿಯನ್ ಟ್ರೋಫಿ ಆಡೋದು ಅನುಮಾನವಾಗಿದೆ.