ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ 2-1 ಮುನ್ನಡೆ ಹೊಂದಿದೆ. ಈ ಪಂದ್ಯ ಗೆದ್ದರೆ ಭಾರತಕ್ಕೆ ಸರಣಿಜಯ ಪ್ರಾಪ್ತವಾಗಲಿದೆ. ನ್ಯೂಜಿಲೆಂಡ್ ಗೆದ್ದರೆ ಸರಣಿ ಸರಿಸಮವಾಗುತ್ತದೆ. ಕೊನೆಯ ಪಂದ್ಯವು ನಿರ್ಧಾರಕವಾಗಲಿದೆ.

ರಾಂಚಿ(ಅ. 26): ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನು ಗೆಲ್ಲುವ ಸನ್ನಾಹದಲ್ಲಿರುವ ಭಾರತ ತಂಡಕ್ಕೆ ನಾಲ್ಕನೇ ಪಂದ್ಯದಲ್ಲಿ ಗೆಲ್ಲಲು 261 ರನ್ ಗುರಿ ಸಿಕ್ಕಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ನಿಗದಿತ 50 ಓವರ್'ನಲ್ಲಿ 7 ವಿಕೆಟ್ ನಷ್ಟಕ್ಕೆ 260 ರನ್ ಕಲೆ ಹಾಕಿದೆ. ಅಗ್ರ ಕ್ರಮಾಂಕದ ಆಟಗಾರರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆದಿದ್ದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಬೃಹತ್ ಮೊತ್ತ ದಾಖಲಿಸುವ ಕುರುಹು ನೀಡಿತ್ತು. ಆದರೆ, ಇನ್ನಿಂಗ್ಸ್'ನ ಕೊನೆಯ 15 ಓವರ್'ನಲ್ಲಿ ಭಾರತೀಯ ಬೌಲರ್'ಗಳು ಕಂಬ್ಯಾಕ್ ಮಾಡಿ ಎದುರಾಳಿಗಳನ್ನು ಕಟ್ಟಿಹಾಕಿದರು. ಮಾರ್ಟಿನ್ ಗುಪ್ಟಿಲ್ 72 ರನ್ ಭಾರಿಸಿ ತಂಡಕ್ಕೆ ಒಳ್ಳೆಯ ಆರಂಭ ಕೊಟ್ಟರು. ಟಾಮ್ ಲಾಥಮ್, ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ 2-1 ಮುನ್ನಡೆ ಹೊಂದಿದೆ. ಈ ಪಂದ್ಯ ಗೆದ್ದರೆ ಭಾರತಕ್ಕೆ ಸರಣಿಜಯ ಪ್ರಾಪ್ತವಾಗಲಿದೆ. ನ್ಯೂಜಿಲೆಂಡ್ ಗೆದ್ದರೆ ಸರಣಿ ಸರಿಸಮವಾಗುತ್ತದೆ. ಕೊನೆಯ ಪಂದ್ಯವು ನಿರ್ಧಾರಕವಾಗಲಿದೆ.

ಸ್ಕೋರು ವಿವರ:

ನ್ಯೂಜಿಲೆಂಡ್ 50 ಓವರ್ 260/7
(ಮಾರ್ಟಿನ್ ಗುಪ್ಟಿಲ್ 72, ಕೇನ್ ವಿಲಿಯಮ್ಸನ್ 41, ಟಾಮ್ ಲಾಥಾಮ್ 39, ರಾಸ್ ಟೇಲರ್ 35 ರನ್ - ಅಮಿತ್ ಮಿಶ್ರಾ 42/2)