Asianet Suvarna News Asianet Suvarna News

ಭಾರತ - ಕಿವೀಸ್​​ 2ನೇ ಟೆಸ್ಟ್​​ : ಭಾರತಕ್ಕೆ ಆರಂಭಿಕ ಆಘಾತ

India New Zealand 2nd Test

ಕೊಲ್ಕೊತ್ತ(ಸೆ.30): ಕಿವೀಸ್​​ ವಿರುದ್ಧ ಈಡನ್​​ ಗಾರ್ಡನ್ಸ್​​​​ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​​ನಲ್ಲಿ ಟೀಮ್​​ ಇಂಡಿಯಾ ಆರಂಭಿಕ ಅಘಾತ ಅನುಭವಿಸಿದೆ. 

ತವರಿನ 250 ಟೆಸ್ಟ್​​ ಆಡುತ್ತಿರುವ ಭಾರತದ ಪಂದ್ಯಕ್ಕೆ ಗಂಗೂಲಿ ಕನಸಿನಂತೆಯೇ ಕಪಿಲ್​​ ದೇವ್​​ ಗಂಟೆ ಭಾರಿಸುವ ಮೂಲಕ ಚಾಲನೆ ನೀಡಿದರು.ಲಾರ್ಡ್ಸ್​​ನಲ್ಲಿರುವಂತೆಯೇ ಇಲ್ಲಿಯೂ ಗಂಟೆ ಅಳವಡಿಸುವುದಾಗಿ ದಾದಾ ಈ ಹಿಂದೆಯೇ ತಿಳಿಸಿದ್ದರು. 

ಅದರಂತೆತೆ ಇನ್ಮುಂದೆ ಟೆಸ್ಟ್​​ ಪಂದ್ಯಗಳಲ್ಲಿ ಗಂಟೆ ಸದ್ದು ಕೇಳಲಿದೆ. ಇನ್ನು 2ನೇ ಟೆಸ್ಟ್​​ನಲ್ಲಿ ಕೊಹ್ಲಿ ಸಾಕಷ್ಟು ಬದಲಾವಣೆಗಳುನ್ನು ಮಾಡಿದ್ದು, ಧವನ್​​ಗೆ ಅವಕಾಶ ಮಾಡಿಕೊಟ್ಟಿದರು. ಆದರೆ, ಮೊದಲಿಗರಾಗಿ ನಿರ್ಗಮಿಸಿ ಕೊಹ್ಲಿ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾದರು.

ಇನ್ನು ಯಾದವ್​​ ಬದಲಿಗೆ ಭುವಿಗೆ ಸ್ಥಾನ ಕೊಡಲಾಗಿದೆ. 2 ವರ್ಷಗಳ ಬಳಿಕ ಟೀಮ್​​ ಇಂಡಿಯಾಗೆ ಕಮ್​​ ಬ್ಯಾಕ್​​ ಮಾಡಿರೋ ಗಂಭೀರ್​​ ಅಂತಿಮ 11ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸದ್ಯದ ವರದಿ ಬಂದಾಗ ಟೀಮ್ ಇಂಡಿಯಾ 57 ರನ್ ಗೆ 3 ವಿಕೆಟ್ ಕಳೆದುಕೊಂಡಿದೆ. ಚೆತೇಶ್ವರ ಪೂಜಾರ(31) ಮತ್ತು ಅಜಿಂಕ್ಯ ರಹಾನೆ (2) ಬ್ಯಾಟಿಂಗ್ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios