ಭಾರತ ಈಗಾಗಲೇ ಅಂಡರ್-17 ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ. ಈ ಮೊದಲು 2019ನೇ ಆವೃತ್ತಿಯ ಅಂಡರ್-20 ಕಪ್'ಗೆ ಆತಿಥ್ಯ ವಹಿಸಲು ಭಾರತ ಬಿಡ್ ಸಲ್ಲಿಸಿತ್ತು.

ನವದೆಹಲಿ(ಅ.08): 2023ರ ಫುಟ್ಬಾಲ್ ಏಷ್ಯಾಕಪ್‌'ಗೆ ಆತಿಥ್ಯ ವಹಿಸಲು ಭಾರತ ಆಸಕ್ತಿ ತೋರಿದ್ದು, ಬಿಡ್ ಸಲ್ಲಿಸಲು ನಿರ್ಧರಿಸಿದೆ ಎಂದು ಭಾರತ ಫುಟ್ಬಾಲ್ ಸಂಸ್ಥೆ (ಎಐಎಫ್'ಎಫ್) ಅಧಿಕಾರಿಗಳು ತಿಳಿಸಿದ್ದಾರೆ.

'ದೆಹಲಿಯಲ್ಲಿ ನಡೆದ ಎಐಎಫ್‌'ಎಫ್‌'ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು’ ಎಂದಿದ್ದಾರೆ.

ಭಾರತ ಈಗಾಗಲೇ ಅಂಡರ್-17 ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ. ಈ ಮೊದಲು 2019ನೇ ಆವೃತ್ತಿಯ ಅಂಡರ್-20 ಕಪ್'ಗೆ ಆತಿಥ್ಯ ವಹಿಸಲು ಭಾರತ ಬಿಡ್ ಸಲ್ಲಿಸಿತ್ತು.