7 ಮತ್ತು 8ನೇ ಸ್ಥಾನಕ್ಕಾಗಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭದಲ್ಲಿ ಭಾರತ ಹಿಡಿತ ಸಾಧಿಸಿತ್ತು.

ಜೊಹಾನ್ಸ್‌'ಬರ್ಗ್(ಜು.22): ಮಹಿಳೆಯರ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಭಾರತ ತಂಡದ ನೀರಸ ಪ್ರದರ್ಶನ ಮುಂದುವರಿದಿದ್ದು, ಇಂದು ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 1-2 ಗೋಲುಗಳ ಅಂತರದಿಂದ ಸೋಲನುಭವಿಸಿತು. ಈ ಮೂಲಕ 8ನೇ ಸ್ಥಾನ ಪಡೆಯುವುದರೊಂದಿಗೆ ಭಾರತ ಪಂದ್ಯಾವಳಿಯಲ್ಲಿ ತನ್ನ ಅಭಿಯಾನ ಮುಗಿಸಿತು.

7 ಮತ್ತು 8ನೇ ಸ್ಥಾನಕ್ಕಾಗಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭದಲ್ಲಿ ಭಾರತ ಹಿಡಿತ ಸಾಧಿಸಿತ್ತು. ಪಂದ್ಯದ 15ನೇ ನಿಮಿಷದಲ್ಲಿ ಗುರುಪ್ರೀತ್ ಕೌರ್ ಗೋಲು ಬಾರಿಸುವ ಮೂಲಕ ಭಾರತದ ಖಾತೆ ತೆರೆದರು. ಆದರೆ, ಪಂದ್ಯದ ಕೊನೆಯ ಕ್ವಾರ್ಟರ್‌ನಲ್ಲಿ ಭಾರತದ ಮೇಲೆ ಸವಾರಿ ನಡೆಸಿದ ಐರ್ಲೆಂಡ್ ತಂಡ ಒಂದು ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸುವ ಮೂಲಕ ಗೆಲುವಿನ ಕೇಕೆ ಹಾಕಿತು.

ಕ್ಯಾಥರಿನ್ ಮುಲ್ಲನ್ (47ನಿ) ಹಾಗೂ ಕಾಲ್ವಿನ್ (48ನಿ) ಐರ್ಲೆಂಡ್ ಪರ ಗೋಲು ಗಳಿಸಿದರು.